ಫ್ರಾನ್ಸ್: ಧಾರ್ಮಿಕ ಶಿಕ್ಷಣ ನೀಡಲು ಸರಕಾರ ಮುಂದು
Update: 2017-10-20 22:24 IST
ಪ್ಯಾರಿಸ್, ಅ. 20: ಫ್ರಾನ್ಸ್‌ನಲ್ಲಿ ಪದೇ ಪದೇ ನಡೆಯುತ್ತಿರುವ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಜಾತ್ಯತೀತ ಕಲ್ಪನೆಯನ್ನು ಪಸರಿಸುವ ಉದ್ದೇಶದಿಂದ ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ನೀಡಲು ಸರಕಾರ ಮುಂದಾಗಿದೆ.
ಫ್ರಾನ್ಸ್‌ನ ಅಲ್ಸೇಸ್ ಮತ್ತು ಮೊಸೇಲ್ ವಲಯಗಳನ್ನು ಹೊರತುಪಡಿಸಿ, ದೇಶದ ಸರಕಾರಿ ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣ ಈಗ ನೀಡಲಾಗುತ್ತಿಲ್ಲ.
ಫ್ರಾನ್ಸ್‌ನ ಜಾತ್ಯತೀತ ಶಾಲಾ ವ್ಯವಸ್ಥೆ 1880ರ ದಶಕದಲ್ಲಿ ರೂಪುಗೊಂಡಾಗ ಅಲ್ಸೇಸ್ ಮತ್ತು ಮೊಸೇಲ್‌ಜರ್ಮನಿಯ ಭಾಗಗಳಾಗಿದ್ದವು. ಹಾಗಾಗಿ, ಈ ವಲಯಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ನೀಡಲಾಗುತ್ತಿದೆ.
ಆದರೆ, 2015ರ ಜನವರಿ ಬಳಿಕ ನಡೆದ ಭಯೋತ್ಪಾದಕ ದಾಳಿಗಳಲ್ಲಿ 241 ಜನರು ಮೃತಪಟ್ಟ ಬಳಿಕ, ‘ಧಾರ್ಮಿಕ ವಿಷಯಗಳ ಜಾತ್ಯತೀತ ಬೋಧನೆ’ಯ ಪ್ರಸ್ತಾಪವನ್ನು ಶಿಕ್ಷಣ ಸಚಿವರು ಮುಂದಿಟ್ಟಿದ್ದಾರೆ.