ಕಾಬೂಲ್ ನಲ್ಲಿ ಆತ್ಮಹತ್ಯಾ ದಾಳಿ: 15 ಸೇನಾ ಕೆಡೆಟ್‌ಗಳು ಹತ

Update: 2017-10-21 16:05 GMT

ಕಾಬೂಲ್, ಅ. 21: ಕಾಬೂಲ್‌ನಲ್ಲಿ ಶನಿವಾರ ನಡೆದ ಆತ್ಮಹತ್ಯಾ ದಾಳಿಯೊಂದರಲ್ಲಿ, ತರಬೇತಿ ಪಡೆಯುತ್ತಿರುವ 15 ಅಫ್ಘಾನ್ ಸೈನಿಕರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

 ‘‘ಇಂದು ಮಧ್ಯಾಹ್ನ ಸೇನಾ ಕೆಡೆಟ್‌ಗಳನ್ನು ಒಯ್ಯುತ್ತಿದ್ದ ಮಿನಿಬಸ್ ಒಂದು ಸೇನಾ ಅಕಾಡಮಿಯಿಂದ ಹೊರಬರುತ್ತಿದ್ದಾಗ, ಆತ್ಮಹತ್ಯಾ ಬಾಂಬರ್ ಒಬ್ಬ ತನ್ನನ್ನು ತಾನು ಸ್ಫೋಟಿಸಿಕೊಂಡನು. ಈ ದಾಳಿಯಲ್ಲಿ 15 ಸೈನಿಕರು ಮೃತಪಟ್ಟಿದ್ದಾರೆ ಹಾಗೂ ನಾಲ್ವರು ಗಾಯಗೊಂಡಿದ್ದಾರೆ’’ ಎಂದು ರಕ್ಷಣಾ ಸಚಿವಾಲಯ ವಕ್ತಾರ ದೌಲತ್ ವಝೀರಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News