ಕ್ಯಾಟಲೋನಿಯ ಸರಕಾರ ವಜಾ

Update: 2017-10-21 16:13 GMT

ಮ್ಯಾಡ್ರಿಡ್ (ಸ್ಪೇನ್), ಅ. 21: ಕ್ಯಾಟಲೋನಿಯದ ವಿಭಜನವಾದಿ ಸರಕಾರವನ್ನು ವಜಾಗೊಳಿಸಿ, ಅಲ್ಲಿ ಹೊಸದಾಗಿ ಚುನಾವಣೆ ನಡೆಸಲು ಸ್ಪೇನ್ ಸರಕಾರ ಶನಿವಾರ ನಿರ್ಧರಿಸಿದೆ. ಸ್ಪೇನ್‌ನ ಈ ವಲಯವು ಸ್ವಾತಂತ್ರ ಘೋಷಿಸುವುದನ್ನು ತಡೆಯುವುದಕ್ಕಾಗಿ ಈ ಅಭೂತಪೂರ್ವ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅದು ಹೇಳಿದೆ.

ನಾಲ್ಕು ದಶಕಗಳಲ್ಲೇ ಅತ್ಯಂತ ಜಟಿಲ ರಾಜಕೀಯ ಬಿಕ್ಕಟ್ಟನ್ನು ಕೊನೆಗೊಳಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಆದರೆ, ಇದಕ್ಕೆ ಸ್ವಾತಂತ್ರ ಬೆಂಬಲಿಗರಿಂದ ಉದ್ರಿಕ್ತ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News