‘ಗುಡ್ ಮಾರ್ನಿಂಗ್’ ಎಂದ ಫೆಲೆಸ್ತೀನ್ ಕಾರ್ಮಿಕನ ಬಂಧನ!

Update: 2017-10-23 15:59 GMT

ಜೆರುಸಲೇಂ (ಇಸ್ರೇಲ್), ಅ. 23: ಫೆಲೆಸ್ತೀನ್ ವ್ಯಕ್ತಿಯೊಬ್ಬ ಫೇಸ್‌ಬುಕ್‌ನಲ್ಲಿ ಹಾಕಿದ ಸಂದೇಶವೊಂದನ್ನು ತಪ್ಪಾಗಿ ಅರ್ಥೈಸಿಕೊಂಡ ಇಸ್ರೇಲ್ ಪೊಲೀಸರು, ಆ ವ್ಯಕ್ತಿಯನ್ನು ಬಂಧಿಸಿದ ಘಟನೆಯೊಂದು ವರದಿಯಾಗಿದೆ.

ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಫೆಲೆಸ್ತೀನ್ ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ‘ಗುಡ್ ಮಾರ್ನಿಂಗ್’ ಸಂದೇಶ ಹಾಕಿದ್ದರು. ಇದನ್ನು ತಪ್ಪಾಗಿ ‘ಅವರ ಮೇಲೆ ದಾಳಿ ಮಾಡು’ ಎಂಬುದಾಗಿ ಅರ್ಥೈಸಿಕೊಂಡ ಪೊಲೀಸರು ಆತನನ್ನು ಬಂಧಿಸಿದರು ಎನ್ನಲಾಗಿದೆ.

ಅರಬ್ಬಿ ಭಾಷೆಯಲ್ಲಿದ್ದ ಮೂಲ ಸಂದೇಶವನ್ನು ಅರ್ಥೈಸಿಕೊಳ್ಳಲು ಪೊಲೀಸರು ಫೇಸ್‌ಬುಕ್‌ನ ‘ಸ್ವಯಂಚಾಲಿತ ಭಾಷಾಂತರ’ ಸೌಲಭ್ಯವನ್ನು ಬಳಸಿದ್ದರು. ಆದರೆ, ಫೇಸ್‌ಬುಕ್‌ನ ಈ ಸೇವೆಯು ನಿಜವಾದ ಅರ್ಥವನ್ನು ಕೊಡುವ ಬದಲು, ವಿರುದ್ಧವಾಗಿ ಅರ್ಥವನ್ನು ನೀಡಿತು!

ಕಟ್ಟಡ ಕಾರ್ಮಿಕನನ್ನು ‘ಪ್ರಚೋದನೆ ನೀಡಿದ’ ಆರೋಪದಲ್ಲಿ ಬಂಧಿಸಲಾಯಿತು ಹಾಗೂ ಆದರೆ, ವಿಷಯ ಗೊತ್ತಾದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಇಸ್ರೇಲ್ ಪೊಲೀಸ್‌ನ ಪಶ್ಚಿಮ ದಂಡೆ ಜಿಲ್ಲಾ ಘಟಕದ ವಕ್ತಾರೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News