ಜಪಾನ್ ಚುನಾವಣೆ: ಶಿಂಜೊ ಅಬೆಗೆ ಭಾರೀ ಬಹುಮತ

Update: 2017-10-23 17:19 GMT

ಟೋಕಿಯೊ, ಅ. 23: ಜಪಾನ್‌ನಲ್ಲಿ ನಡೆದ ಮಧ್ಯಾಂತರ ಚುನಾವಣೆಯಲ್ಲಿ ಜಪಾನ್ ಪ್ರಧಾನಿ ಶಿಂಜೊ ಅಬೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ್ದಾರೆ. ಫಲಿತಾಂಶ ಪ್ರಕಟಗೊಂಡ ಬೆನ್ನಿಗೇ, ಉತ್ತರ ಕೊರಿಯದೊಂದಿಗೆ ‘ದೃಢವಾಗಿ ವ್ಯವಹರಿಸುವ’ ಪ್ರತಿಜ್ಞೆಗೈದಿದ್ದಾರೆ.

ಅಬೆಯ ಕನ್ಸರ್ವೇಟಿವ್ ಮೈತ್ರಿಕೂಟ ಕನಿಷ್ಠ 312 ಸ್ಥಾನಗಳನ್ನು ಗೆಲ್ಲುವ ಹಾದಿಯಲ್ಲಿದೆ ಎಂದು ಸರಕಾರಿ ಟೆಲಿವಿಶನ್ ಎನ್‌ಎಚ್‌ಕೆ ವರದಿ ಮಾಡಿದೆ. ಇದರೊಂದಿಗೆ ಅವರು ಸಂಸತ್ತಿನ ಕೆಳಮನೆಯಲ್ಲಿ ಮೂರನೆ ಎರಡು ಬಹುಮತ ಪಡೆಯುವುದು ಖಚಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News