ಬೃಹತ್ ನಾಗರಿಕ ಅಸಹಕಾರ: ಕ್ಯಾಟಲೋನಿಯದ ರಾಜಕೀಯ ಪಕ್ಷದ ಬೆದರಿಕೆ

Update: 2017-10-23 17:39 GMT

ಬಾರ್ಸಿಲೋನ, ಅ. 23: ಕ್ಯಾಟಲನ್ ಸರಕಾರ ಸ್ಪೇನ್‌ನಿಂದ ಸ್ವಾತಂತ್ರ್ಯ ಘೋಷಿಸುವುದನ್ನು ತಪ್ಪಿಸಲು ಆ ಸರಕಾರವನ್ನು ಸ್ಪೇನ್ ವಜಾಗೊಳಿಸಿದರೆ ‘ಬೃಹತ್ ನಾಗರಿಕ ಅಸಹಕಾರ’ಚಳವಳಿಯನ್ನು ಆರಂಭಿಸಲಾಗುವುದು ಎಂದು ಕ್ಯಾಟಲನ್ ವಲಯದ ಪಾಪ್ಯುಲರ್ ಯೂನಿಟಿ ಕ್ಯಾಂಡಿಡಸಿ ಪಕ್ಷ ಸೋಮವಾರ ಬೆದರಿಕೆ ಹಾಕಿದೆ.

ಸ್ಪೇನ್ ಸರಕಾರದ ಯೋಜನೆಯು, ಸರ್ವಾಧಿಕಾರಿ ಫ್ರಾಂಕೊ ಬಳಿಕ ಕ್ಯಾಟಲೋನಿಯದ ಜನರ ವಿರುದ್ಧದ ‘ಅತಿದೊಡ್ಡ ಆಕ್ರಮಣ’ವಾಗಿರುತ್ತದೆ ಎಂದು ಎಡಪಂಥೀಯ ಪಕ್ಷ ಬಣ್ಣಿಸಿದೆ.

‘‘ಈ ಆಕ್ರಮಣಕ್ಕೆ ಬೃಹತ್ ನಾಗರಿಕ ಅಸಹಕಾರದ ಮೂಲಕ ಪ್ರತಿಕ್ರಿಯೆ ನೀಡಲಾಗುತ್ತದೆ’’ ಎಂದು ವಲಯದ ಪ್ರಬಲ ಪಕ್ಷ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News