ಸೀನಿಯರ್ ಬುಶ್ ವಿರುದ್ಧ ಮತ್ತೋರ್ವ ನಟಿಯಿಂದ ಕಿರುಕುಳ ಆರೋಪ
Update: 2017-10-27 22:59 IST
ಓಗನ್‌ಕ್ವಿಟ್ (ಮೇನ್), ಅ. 27: ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಎಚ್. ಡಬ್ಲು. ಬುಶ್ ತನಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದಾಗಿ ಇನ್ನೋರ್ವ ನಟಿ ಜೋರ್ಡಾನಾ ಗ್ರಾಲ್ನಿಕ್ ಆರೋಪಿಸಿದ್ದಾರೆ.
ಕಳೆದ ವರ್ಷ ಅಮೆರಿಕದ ರಾಜ್ಯ ಮೇನ್‌ನಲ್ಲಿನ ಓಗನ್‌ಕ್ವಿಟ್ ಪ್ಲೇಹೌಸ್‌ನಲ್ಲಿ ಗುಂಪು ಚಿತ್ರ ತೆಗೆಯುತ್ತಿದ್ದಾಗ ಬುಶ್ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ನಟಿ ಹೇಳಿದ್ದಾರೆ.
ಇದಕ್ಕೂ ಮೊದಲು, ನಟಿ ಹೆದರ್ ಲಿಂಡ್ 93 ವರ್ಷದ ಮಾಜಿ ಅಧ್ಯಕ್ಷರ ವಿರುದ್ಧ ಇಂಥದೇ ಆರೋಪವನ್ನು ಮಾಡಿದ್ದರು.
ಅವರು 1989ರಿಂದ 1993ರವರೆಗೆ ಅಮೆರಿಕದದ ಅಧ್ಯಕ್ಷರಾಗಿದ್ದರು.