×
Ad

ಯುದ್ಧಕ್ಕೆ ಸಿದ್ಧವಾಗಿರುವಂತೆ ಸೇನೆಗೆ ಚೀನಾ ಅಧ್ಯಕ್ಷ ಕರೆ

Update: 2017-10-27 23:53 IST

ಬೀಜಿಂಗ್, ಅ. 27: ಚೀನಾದ ಅಧ್ಯಕ್ಷರಾಗಿ ಎರಡನೆ ಅವಧಿಯನ್ನು ಆರಂಭಿಸಿರುವ ಕ್ಸಿ ಜಿನ್‌ಪಿಂಗ್, ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷಕ್ಕೆ ನಿಷ್ಠೆಯಿಂದಿರುವಂತೆ ಹಾಗೂ ಯುದ್ಧಕ್ಕೆ ಸಿದ್ಧವಾಗಿರುವಂತೆ ದೇಶದ ಸೇನೆಗೆ ಕರೆ ನೀಡಿದ್ದಾರೆ.

23 ಲಕ್ಷ ಸಂಖ್ಯಾ ಬಲದ ಚೀನಾ ಸೇನೆ ಜಗತ್ತಿನ ಅತಿ ದೊಡ್ಡ ಸೇನೆಯಾಗಿದೆ.

64 ವರ್ಷದ ಜಿನ್‌ಪಿಂಗ್ ಅಧಿಕಾರದ ಪ್ರಧಾನ ತಳಹದಿ ಎಂದು ಭಾವಿಸಲಾದ ಸೇನೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಮೂಲಕ ಗುರುವಾರ ತನ್ನ ದ್ವಿತೀಯ ಅವಧಿಯನ್ನು ಆರಂಭಿಸಿದರು.

ಒಳವೆಬಾಕ್ಸ್

ಬೆಲ್ಟ್ ಮತ್ತು ರೋಡ್ ಯೋಜನೆಯಲ್ಲಿ ಭಾರತ ಕೈಜೋಡಿಸಬೇಕು: ಚೀನಾ

ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ಮಹತ್ವಾಕಾಂಕ್ಷೆಯ ‘ಬೆಲ್ಟ್ ಮತ್ತು ರೋಡ್ ಯೋಜನೆ’ಯ ಬಗ್ಗೆ ತಾನು ಹೊಂದಿರುವ ಅನುಮಾನವನ್ನು ಭಾರತ ತೊಡೆದುಹಾಕಿ, ಯೋಜನೆಯಲ್ಲಿ ಕೈಜೋಡಿಸಬೇಕು ಎಂದು ಚೀನಾ ಗುರುವಾರ ಭಾರತಕ್ಕೆ ಕರೆ ನೀಡಿದೆ.

‘‘ಈ ಯೋಜನೆಯು ಪ್ರಸ್ತುತ ವಿಷಯಗಳ ಬಗ್ಗೆ ಚೀನಾ ಹೊಂದಿರುವ ನಿಲುವನ್ನು ಬದಲಿಸುವುದಿಲ್ಲ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಂಗ್ ಬೀಜಿಂಗ್‌ನಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News