×
Ad

ಇಂಗ್ಲೆಂಡ್‌ಗೆ ಅಂಡರ್-17 ಫಿಫಾ ವಿಶ್ವಕಪ್

Update: 2017-10-28 22:19 IST

ಕೋಲ್ಕತಾ, ಅ.28: ಫಿಫಾ ಅಂಡರ್-17 ವಿಶ್ವಕಪ್ ಫುಟ್ಬಾಲ್ ಟೂರ್ನಮೆಂಟ್ ನ ಫೈನಲ್‌ನಲ್ಲಿ ಶನಿವಾರ ಸ್ಪೇನ್‌ನ್ನು 5-2 ಅಂತರದಲ್ಲಿ ಬಗ್ಗು ಬಡಿದ ಇಂಗ್ಲೆಂಡ್ ಮೊದಲ ಬಾರಿ ವಿಶ್ವ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.

 ಮ್ಯಾಂಚೆಸ್ಟರ್ ಸಿಟಿ ಮಿಡ್‌ಫೀಲ್ಡರ್ ಫಿಲ್ ಫೊಡೆನ್ ದಾಖಲಿಸಿದ ಅವಳಿ ಗೆಲುವಿನ ನೆರವಿನಲ್ಲಿ ಇಂಗ್ಲೆಂಡ್ ತಂಡ ಯುರೋಪಿಯನ್ ಚಾಂಪಿಯನ್ ಸ್ಪೇನ್‌ಗೆ ಸೋಲುಣಿಸಿತು.

ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಪೇನ್ ಪಂದ್ಯದ ಮೊದಲಾರ್ಧದಲ್ಲಿ ಅವಳಿ ಗೋಲು ದಾಖಲಿಸಿ ಇಂಗ್ಲೆಂಡ್‌ನ ಮೇಲುಗೈ ಸಾಧಿಸಿತ್ತು. ಬಾರ್ಸಿಲೋನಾದ ಸೆರ್ಗಿಯೊ ಗೋಮೆಝ್ 10 ನೆ ಮತ್ತು 31ನೆ ನಿಮಿಷದಲ್ಲಿ ಅವಳಿ ಗೋಲು ಜಮೆ ಮಾಡಿ ಸ್ಪೇನ್‌ಗೆ 2-0 ಮುನ್ನಡೆ ಸಾಧಿಸಲು ನೆರವಾದರು.

ಪ್ರಥಮಾರ್ಧದ ಕೊನೆಯಲ್ಲಿ ರ್ಯಾನ್ ಬ್ರೆವ್‌ಸ್ಟರ್ (44ನೆ ನಿಮಿಷ) ಗೋಲು ಜಮೆ ಮಾಡಿ ಇಂಗ್ಲೆಂಡ್‌ನ ಗೋಲು ಖಾತೆ ತೆರದರು.

 ದ್ವಿತಿಯಾರ್ಧದಲ್ಲಿ ಇಂಗ್ಲೆಂಡ್‌ನ ಮಾರ್ಗನ್ ಗಿಬ್ಸ್ ವೈಟ್ 58ನೆ ನಿಮಿಷದಲ್ಲಿ ಗೋಲು ಜಮೆ ಮಾಡಿ ಸಮಬಲ ಸಾಧಿಸಿದರು.ಫೊಡೆನ್ 69ನೆ ನಿಮಿಷದಲ್ಲಿ ಗೋಲು ಗಳಿಸಿ 3-2 ಮೇಲುಗೈ ಸಾಧಿಸಲು ನೆರವಾದರು.

 ಇಂಗ್ಲೆಂಡ್‌ನ ಮಾರ್ಕ್ ಗುಯೀ 84ನೆ ನಿಮಿಷದಲ್ಲಿ ಗೋಲು ಬಾರಿಸಿದರು. 88ನೆ ನಿಮಿಷದಲ್ಲಿ ಫೊಡೆನ್ ಇನ್ನೊಂದು ಗೋಲು ದಾಖಲಿಸಿ ಇಂಗ್ಲೆಂಡ್ ಭರ್ಜರಿ ಗೆಲುವು ದಾಖಲಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News