×
Ad

ಮೂರನೆ ಏಕದಿನ: ಕೊಹ್ಲಿ, ರೋಹಿತ್ ಶತಕ

Update: 2017-10-29 16:33 IST
 2ನೆ ವಿಕೆಟ್‌ಗೆ 230 ರನ್‌ಗಳ ಜೊತೆಯಾಟ ನೀಡಿರುವ ಕೊಹ್ಲಿ ಮತ್ತು ರೋಹಿತ್

ಕಾನ್ಪುರ, ಅ.29: ಇಲ್ಲಿನ ಗ್ರೀನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೂರನೆ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಆರಂಭಿಕ ದಾಂಡಿಗ ರೋಹಿತ್ ಶರ್ಮ ಮತ್ತು ನಾಯಕ ವಿರಾಟ್ ಕೊಹ್ಲಿ ಶತಕ ದಾಖಲಿಸಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಮೊದಲ ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು. ಶಿಖರ್ ಧವನ್ (14) ಅವರು 7ನೆ ಓವರ್‌ನ ಮೊದಲ ಎಸೆತದಲ್ಲಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. ಆಗ ತಂಡದ ಸ್ಕೋರ್ 29 ಆಗಿತ್ತು. ಬಳಿಕ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಜೊತೆಯಾಗಿ ತಂಡವನ್ನು ಆಧರಿಸಿದರು.

ರೋಹಿತ್ ಶರ್ಮ 171ನೆ ಪಂದ್ಯದಲ್ಲಿ 106 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 15ನೆ ಏಕದಿನ ಶತಕ ದಾಖಲಿಸಿದರು.

ವಿರಾಟ್ ಕೊಹ್ಲಿ 202ನೆ ಏಕದಿನ ಪಂದ್ಯದಲ್ಲಿ 32ನೆ ಏಕದಿನ ಶತಕ ಪೂರೈಸಿದರು. ಕೊಹ್ಲಿ 96 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಶತಕ ಗಳಿಸಿದರು. ಕೊಹ್ಲಿ ನ್ಯೂಝಿಲೆಂಡ್ ವಿರುದ್ಧದ ಸರಣಿಯಲ್ಲಿ 2ನೆ ಶತಕ ದಾಖಲಿಸಿದ್ದಾರೆ. ಮೂರು ಮಾದರಿಯ ಕ್ರಿಕೆಟ್ ನಲ್ಲಿ ಒಟ್ಟು 49 ಶತಕ ಪೂರ್ಣಗೊಳಿಸುವ ಮೂಲಕ 48 ಶತಕ ಸಿಡಿರುವ ರಾಹುಲ್ ದ್ರಾವಿಡ್ ರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ. 

ಕೊಹ್ಲಿ ಮತ್ತು ರೋಹಿತ್ 2ನೆ ವಿಕೆಟ್‌ಗೆ 230 ರನ್‌ಗಳ ಜೊತೆಯಾಟ ನೀಡಿದ್ದಾರೆ. ರೋಹಿತ್ ಶರ್ಮ 147 ರನ್ (138ಎ, 18ಬೌ,2ಸಿ) ಗಳಿಸಿ ಸ್ಯಾಂಟ್ನೆರ್ ಎಸೆತದಲ್ಲಿ ಸೌಥಿಗೆ ಕ್ಯಾಚ್ ನೀಡಿದರು. ಭಾರತ 41.1  ಓವರ್ ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 273 ರನ್ ಗಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News