×
Ad

ಟಿ20 ಪಂದ್ಯದಲ್ಲಿ ಅತೀ ವೇಗದ ಶತಕ ಸಿಡಿಸಿ ದಾಖಲೆ ಬರೆದ ಮಿಲ್ಲರ್

Update: 2017-10-29 20:38 IST

ಹೊಸದಿಲ್ಲಿ, ಅ.29: ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ 2ನೆ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ದೇವಿಡ್ ಮಿಲ್ಲರ್ ಟಿ20 ಇತಿಹಾಸದಲ್ಲೇ ಅತೀ ವೇಗದ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ.

35 ಎಸೆತಗಳಲ್ಲಿ ಶತಕ ಬಾರಿಸಿದ ಮಿಲ್ಲರ್ 7 ಬೌಂಡರಿ ಹಾಗು 9 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಈ ಹಿಂದೆ ಅತೀ ವೇಗದ ಶತಕ ಸಿಡಿಸಿದ ದಾಖಲೆ ರಿಚರ್ಡ್ ಲೆವಿಯವರ ಹೆಸರಿನಲ್ಲಿತ್ತು. 2012ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯವೊಂದರಲ್ಲಿ ಲೆವಿ 45 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

19ನೆ  ಓವರ್ ನಲ್ಲಿ ಸತತ 5 ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಮಿಲ್ಲರ್ ಶತಕ ಪೂರೈಸಿದರು. ಕೊನೆಯ ಓವರ್ ವೇಳೆಗೆ ಶತಕ ಪೂರೈಸಲು 12 ರನ್ ಬೇಕಾಗಿತ್ತು. ಮಿಲ್ಲರ್ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ 224 ರನ್ ಗಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News