3ನೆ ಏಕದಿನ: ಕೀವೀಸ್ ವಿರುದ್ಧ ಭಾರತಕ್ಕೆ 6 ರನ್‌ಗಳ ರೋಚಕ ಜಯ
Update: 2017-10-29 21:43 IST
ಕಾನ್ಪುರ, ಅ.29: ನ್ಯೂಝಿಲೆಂಡ್ ವಿರುದ್ಧದ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಇಂದು 6 ರನ್‌ಗಳ ರೋಚಕ ಜಯ ಗಳಿಸಿದ್ದು, ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.
ಇಲ್ಲಿನ ಗ್ರೀನ್‌ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 338 ರನ್‌ಗಳ ಸವಾಲನ್ನು ಪಡೆದ ನ್ಯೂಝಿಲೆಂಡ್ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 331 ರನ್ ಗಳಿಸಿತು.
ನ್ಯೂಝಿಲೆಂಡ್ ತಂಡದ ಕಾಲಿನ್ ಮುನ್ರೊ (75) ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಲಥಾಮ್ 65 ರನ್, ನಾಯಕ ಕೇನ್ ವಿಲಿಯಮ್ಸನ್ 64ರನ್, ರಾಸ್ ಟೇಲರ್ 39ರನ್, ಹೆನ್ರಿ ನಿಕೊಲ್ಸ್ 37ರನ್, ಮಾರ್ಟಿನ್ ಗಪ್ಟಿಲ್ 10ರನ್, ಸ್ಯಾಂಟ್ನೆರ್ 10ರನ್ ,ಗ್ರಾಂಡ್‌ಹೋಮೆ ಔಟಾಗದೆ 8ರನ್ ಗಳಿಸಿದರು.
ಭಾರತ ಆರಂಭಿಕ ದಾಂಡಿಗ ರೋಹಿತ್ ಶರ್ಮ ಮತ್ತು ನಾಯಕ ವಿರಾಟ್ ಕೊಹ್ಲಿ ಶತಕದ ನೆರವಿನಲ್ಲಿ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 337 ರನ್ ಗಳಿಸಿತ್ತು.