ಬ್ರಹ್ಮಪುತ್ರ ನದಿಯಿಂದ 1,000 ಕಿ.ಮೀ. ಉದ್ದದ ಸುರಂಗ ತೋಡಲು ಚೀನಾ ಪ್ಲ್ಯಾನ್

Update: 2017-10-30 17:21 GMT

ಬೀಜಿಂಗ್, ಅ. 30: ಟಿಬೆಟ್‌ನಲ್ಲಿರುವ ಬ್ರಹ್ಮಪುತ್ರ ನದಿಯಿಂದ ಒಣ ಕ್ಸಿನ್‌ಜಿಯಾಂಗ್ ವಲಯಕ್ಕೆ ನೀರೊಯ್ಯುವುದಕ್ಕಾಗಿ 1,000 ಕಿ.ಮೀ. ಉದ್ದದ ಸುರಂಗವೊಂದನ್ನು ನಿರ್ಮಿಸುವ ತಂತ್ರಜ್ಞಾನದ ಬಗ್ಗೆ ಚೀನಾದ ಇಂಜಿನಿಯರ್‌ಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಾಧ್ಯಮ ವರದಿಯೊಂದು ಸೋಮವಾರ ತಿಳಿಸಿದೆ.

ಇದು ಸಂಭವಿಸಿದರೆ ಜಗತ್ತಿನ ಅತಿ ಉದ್ದದ ಸುರಂಗ ಕಾಲುವೆ ಇದಾಗಲಿದೆ.

ಈ ಯೋಜನೆ ಯಶಸ್ವಿಯಾದರೆ ಕ್ಸಿನ್‌ಜಿಯಾಂಗ್ ಕ್ಯಾಲಿಫೋರ್ನಿಯ ಆಗಿ ಮಾರ್ಪಡುವುದು ಎಂದು ಭಾವಿಸಲಾಗಿದೆ.

ಆದಾಗ್ಯೂ, ಇದು ಹಿಮಾಲಯ ವಲಯದ ಮೇಲೆ ಬೀರಲಿರುವ ಸಂಭಾವ್ಯ ದುಷ್ಪರಿಣಾಮಗಳ ಬಗ್ಗೆ ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಹಾಂಕಾಂಗ್‌ನ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News