×
Ad

ಟೀಮ್ ಇಂಡಿಯಾಕ್ಕೆ ಗೆಲ್ಲಲು 197 ರನ್‌ಗಳ ಸವಾಲು

Update: 2017-11-04 20:49 IST

 ರಾಜ್‌ಕೋಟ್, ನ.4: ಭಾರತ ವಿರುದ್ಧ ದ್ವಿತೀಯ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನ್ಯೂಝಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 196 ರನ್ ಗಳಿಸಿದೆ.

ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ  ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡು ಭಾರತದ ಗೆಲುವಿಗೆ ಕಠಿಣ ಸವಾಲು ವಿಧಿಸಿದೆ.

ಆರಂಭಿಕ ದಾಂಡಿಗ ಕಾಲಿನ್ ಮುನ್ರೊ 109ರನ್(58ಎ, 7ಬೌ,7ಸಿ) ಗಳಿಸುವ ಮೂಲಕ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 2ನೆ ಶತಕ ದಾಖಲಿಸಿದ್ದಾರೆ.

ಮಾರ್ಟಿನ್ ಗಪ್ಟಿಲ್ ಮತ್ತು ಮುನ್ರೊ ಮೊದಲ ವಿಕೆಟ್‌ಗೆ 11.1 ಓವರ್‌ಗಳಲ್ಲಿ 105 ರನ್ ಗಳಿಸಿದರು. ಗಪ್ಟಿಲ್ 45ರನ್, ನಾಯಕ ಕೇನ್ ವಿಲಿಯಮ್ಸನ್ 12ರನ್,ಟಾಮ್ ಬ್ರೂಸಿ 18 ರನ್ ಗಳಿಸಿದರು. ಮುಹಮ್ಮದ್ ಸಿರಾಜ್ 53ಕ್ಕೆ 1 ವಿಕೆಟ್ ಉಡಾಯಿಸುವ ಚೊಚ್ಚಲ ವಿಕೆಟ್ ಪಡೆದರು. ಯಜುವೆಂದ್ರ ಚಹಾಲ್36ಕ್ಕೆ 1 ವಿಕೆಟ್ ಗಿಟ್ಟಿಸಿಕೊಂಡರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News