×
Ad

ದ್ವಿತೀಯ ಟ್ವೆಂಟಿ-20: ಭಾರತಕ್ಕೆ 40 ರನ್ ಗಳ ಸೋಲು

Update: 2017-11-04 22:43 IST

ರಾಜ್ ಕೋಟ್, ನ.4: ಎರಡನೆ ಟ್ವೆಂಟಿ -20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತಕ್ಕೆ   40 ರನ್ ಗಳ ಸೋಲಾಗಿದೆ.

ಗೆಲುವಿಗೆ 197 ರನ್ ಗಳ ಕಠಿಣ ಸವಾಲು ಪಡೆದ ಭಾರತ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 156 ರನ್ ಗಳಿಸಿತು.

ಭಾರತದ ಪರ ನಾಯಕ ವಿರಾಟ್ ಕೊಹ್ಲಿ 65 ರನ್, ಮಹೇಂದ್ರ ಸಿಂಗ್  ಧೋನಿ 49ರನ್ ಮತ್ತು ಶ್ರೇಯಸ್ ಅಯ್ಯರ್ 23 ರನ್ ಗಳಿಸಿದರು.

ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ತಲಾ 1 ಗೆಲುವಿನೊಂದಿಗೆ ಉಭಯ ತಂಡಗಳು ಸಮಬಲ ಸಾಧಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News