ಡಬಲ್ ಹ್ಯಾಟ್ರಿಕ್ ಮೂಲಕ ಮಿಚೆಲ್ ಸ್ಟಾರ್ಕ್ ಐತಿಹಾಸಿಕ ಸಾಧನೆ

Update: 2017-11-07 15:03 GMT

ಸಿಡ್ನಿ, ನ.7 : ಅಸ್ಟ್ರೇಲಿಯದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ನ್ಯೂ ಸೌತ್ ವೇಲ್ಸ್ ಮತ್ತು ವೆಸ್ಟರ್ನ್ ಆಸ್ಟ್ರೇಲಿಯ ತಂಡಗಳ ನಡುವಿನ ಪ್ರಥಮ ದರ್ಜೆ ಪಂದ್ಯದಲ್ಲಿ ಎರಡೂ ಇನಿಂಗ್ಸ್‌ಗಳಲ್ಲೂ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಶೀಫಿಲ್ಡ್ ಶೀಲ್ಡ್ (ಪುರಾ ಕಪ್) ಪ್ರಥಮ ದರ್ಜೆ ಪಂದ್ಯದಲ್ಲಿ ನ್ಯೂಸೌತ್ ವೇಲ್ಸ್ ತಂಡ ಮಿಚೆಲ್ ಸ್ಟಾರ್ಕ್ ಅವರ ದಾಳಿಯ ನೆರವಿನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯ ವಿರುದ್ಧ 171 ರನ್‌ಗಳ ಜಯ ಗಳಿಸಿದೆ.
  ಪಂದ್ಯದ ನಾಲ್ಕನೆ ಹಾಗೂ ಅಂತಿಮ ದಿನವಾಗಿರುವ ಮಂಗಳವಾರ ಎರಡನೆ ಇನಿಂಗ್ಸ್‌ನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯ ತಂಡ 77.1 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲೌಟಾಗಿದೆ. ಅಂತಿಮ ಮೂರು ವಿಕೆಟ್‌ಗಳನ್ನು ಉರುಳಿಸಿದ ಸ್ಟಾರ್ಕ್ ಎರಡನೆ ಬಾರಿ ಹ್ಯಾಟ್ರಿಕ್ ಪಡೆದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವೆಸ್ಟರ್ನ್ ಆಸ್ಟ್ರೇಲಿಯ ಎರಡನೆ ಇನಿಂಗ್ಸ್‌ನಲ್ಲಿ 77.1 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲೌಟಾಗಿತ್ತು. ಸ್ಟಾರ್ಕ್ 15.1 ಓವರ್‌ಗಳಲ್ಲಿ 41ಕ್ಕೆ 3 ವಿಕೆಟ್ ಪಡೆದಿದ್ದರು.

ಮೊದಲ ಇನಿಂಗ್ಸ್‌ನಲ್ಲಿ 67ನೆ ಓವರ್‌ನಲ್ಲಿ ವೆಸ್ಟರ್ನ್ ಅಸ್ಟ್ರೇಲಿಯದ ಅಂತಿಮ ಮೂರು ವಿಕೆಟ್‌ಗಳನ್ನು ಉರುಳಿಸಿ ಹ್ಯಾಟ್ರಿಕ್ ಗಳಿಸಿದ್ದರು. 20 ಓವರ್‌ಗಳಲ್ಲಿ 64ಕ್ಕೆ 4 ವಿಕೆಟ್ ಪಡೆದು ವೆಸ್ಟರ್ನ್ ಆಸ್ಟ್ರೇಲಿಯವನ್ನು 67 ಓವರ್‌ಗಳಲ್ಲಿ 176ಕ್ಕೆ ನಿಯಂತ್ರಿಸಿದ್ದರು. ನ್ಯೂ ಸೌತ್ ವೇಲ್ಸ್ ಮೊದಲ ಇನಿಂಗ್ಸ್‌ನಲ್ಲಿ 270 ಮತ್ತು ಎರಡನೆ ಇನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟದಲ್ಲಿ 300 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News