ಅಂತಿಮ ಪಂದ್ಯ: ಕಿವೀಸ್‌ನ ಗೆಲುವಿಗೆ 68 ರನ್ ಸವಾಲು
ತಿರುವನಂತಪುರ, ನ.7: ಮಳೆಯಿಂದಾಗಿ ಎರಡೂವರೆ ತಡವಾಗಿ ಆರಂಭಗೊಂಡ ನ್ಯೂಝಿಲೆಂಡ್ ವಿರುದ್ಧದ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತ ನಿಗದಿತ 8 ಓವರ್ ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 67 ರನ್ ಗಳಿಸಿದೆ.
ಇಲ್ಲಿನ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಮೊದಲ ಬಾರಿ ನಡೆದ ಪಂದ್ಯ ಭಾರೀ ಮಳೆಯಿಂದಾಗಿ ಎರಡೂವರೆ ಗಂಟೆ ತಡವಾಗಿ ಆರಂಭಗೊಂಡಿತು.
ನ್ಯೂಝಿಲೆಂಡ್‌ನ ಟಿಮ್ ಸೌಥಿ(13ಕ್ಕೆ 2), ಸೋಧಿ (23ಕ್ಕೆ2) ಮತ್ತು ಟ್ರೆಂಟ್ ಬೌಲ್ಟ್(13ಕ್ಕೆ1) ದಾಳಿಗೆ ಸಿಲುಕಿದ ಭಾರತ ದೊಡ್ಡ ಮೊತ್ತದ ಸವಾಲನ್ನು ದಾಖಲಿಸುವಲ್ಲಿ ವಿಫಲವಾಗಿದೆ.
ಆರಂಭಿಕ ದಾಂಡಿಗರಾದ ಶಿಖರ್ ಧವನ್ 6 ರನ್, ರೋಹಿತ್ ಶರ್ಮ 8ರನ್, ನಾಯಕ ವಿರಾಟ್ ಕೊಹ್ಲಿ 13 ರನ್ ,ಶ್ರೇಯಸ್ ಅಯ್ಯರ್ 6ರನ್, ಮನೀಷ್ ಪಾಂಡೆ 17 ರನ್ ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಔಟಾಗದೆ 14 ರನ್ ಗಳಿಸಿದರು.
ನ್ಯೂಝಿಲೆಂಡ್ ತಂಡಗಳ ನಡುವಿನ ಮೂರನೆ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯ ತಲಾ 8 ಓವರ್‌ಗಳಿಗೆ ಸೀಮಿತಗೊಂಡಿದ್ದು, ಟಾಸ್ ಜಯಿಸಿದ ನ್ಯೂಝಿಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತ್ತು.
ರಾತ್ರಿ 8.23ರ ತನಕ ಮಳೆ ಸುರಿಯಿತು. 9:15 ಕ್ಕೆ ನಾಣ್ಯ ಚಿಮ್ಮುವಿಕೆ ನಡೆಯಿತು. 9:30ಕ್ಕೆ ಆಟ ಆರಂಭಗೊಂಡಿತು. ಭಾರತದ ಆರಂಭಿಕ ದಾಂಡಿಗರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಇನಿಂಗ್ಸ್ ಆರಂಭಿಸಿದರು.