1,200 ಮೆಗಾವ್ಯಾಟ್ ಚೀನಾ ಗುತ್ತಿಗೆ ರದ್ದುಪಡಿಸಿದ ನೇಪಾಳ

Update: 2017-11-13 16:32 GMT

ಕಠ್ಮಂಡು, ನ. 13: ಚೀನಾದ ಸರಕಾರಿ ಒಡೆತನದ ಕಂಪೆನಿಯೊಂದಕ್ಕೆ ನೀಡಲಾಗಿರುವ 1,200 ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಯೋಜನೆಯ ಗುತ್ತಿಗೆಯನ್ನು ನೇಪಾಳ ಸೋಮವಾರ ರದ್ದುಪಡಿಸಿದೆ.

ಬುದಿ ಗಂಡಕಿ ಜಲವಿದ್ಯುತ್ ಯೋಜನೆಯ ಗುತ್ತಿಗೆಯನ್ನು ಚೀನಾದ ಗೆಝೂಬ ಗುಂಪಿಗೆ ನೀಡಲಾಗಿತ್ತು. ಗುತ್ತಿಗೆಯನ್ನು ರದ್ದುಪಡಿಸುವ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಯೋಜನೆಯ ಗುತ್ತಿಗೆಗೆ ಚೀನಾದ ಕಂಪೆನಿಯೊಂದಿಗೆ ‘ನಿರ್ಲಕ್ಷ್ಯ ಮತ್ತು ನಿಗೂಢವಾಗಿ’ ಸಹಿ ಹಾಕಲಾಗಿತ್ತು ಎಂದು ನೇಪಾಳ ಉಪ ಪ್ರಧಾನಿ ಕಮಲ್ ಥಾಪಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News