ಟಸ್ಟ್ ನ ಐದೂ ದಿನ ಬ್ಯಾಟಿಂಗ್ ಮಾಡಿದ ಪೂಜಾರ!

Update: 2017-11-20 17:55 GMT

ಕೋಲ್ಕತಾ, ನ.20: ಭಾರತದ ಮಧ್ಯಮ ಕ್ರಮಾಂಕದ ದಾಂಡಿಗ ಚೇತೇಶ್ವರ ಪೂಜಾರ ಐದನೆ ದಿನವಾದ ಸೋಮವಾರ ಬ್ಯಾಟಿಂಗ್‌ಗೆ ಇಳಿಯುವ ಮೂಲಕ ಒಂದು ಪ್ರಮುಖ ಕ್ಲಬ್‌ಗೆ ಸೇರ್ಪಡೆಯಾದರು. ಪೂಜಾರ ಟೆಸ್ಟ್ ಕ್ರಿಕೆಟ್‌ನ ಎಲ್ಲ ಐದೂ ದಿನ ಬ್ಯಾಟಿಂಗ್ ಮಾಡಿದ ಭಾರತದ ಮೂರನೆ ಹಾಗೂ ವಿಶ್ವದ 9ನೆ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ಟೆಸ್ಟ್‌ನ ಮೊದಲ ದಿನದಾಟದಲ್ಲಿ ಕೆಎಲ್ ರಾಹುಲ್ ಶೂನ್ಯಕ್ಕೆ ಔಟಾದ ತಕ್ಷಣ ಪೂಜಾರ ಬ್ಯಾಟಿಂಗ್‌ಗೆ ಇಳಿದಿದ್ದರು. ಮಳೆ ಹಾಗೂ ಮಂದ ಬೆಳಕಿನಿಂದಾಗಿ ಮೊದಲದಿನದ ಆಟ ಬೇಗನೆ ಕೊನೆಗೊಂಡ ಸಂದರ್ಭ ಪೂಜಾರ ಅಜೇಯ 8 ರನ್ ಗಳಿಸಿದ್ದರು. 2ನೆ ದಿನವೂ ಮಳೆಗಾಹುತಿಯಾದಾಗ ಪೂಜಾರ ಅಜೇಯ 47 ರನ್ ಗಳಿಸಿದ್ದರು. ಮೂರನೆ ದಿನ 52 ರನ್ ಗಳಿಸಿ ಔಟಾದರು. ನಾಲ್ಕನೆ ದಿನದಾಟದಂತ್ಯಕ್ಕೆ 2ನೆ ಇನಿಂಗ್ಸ್‌ನಲ್ಲಿ ಅಜೇಯ 2 ರನ್ ಗಳಿಸಿದ್ದರು. ಐದನೆ ದಿನದಾಟದಲ್ಲಿ 22 ರನ್ ಗಳಿಸಿ ಔಟಾದರು.

ಭಾರತದ ಪರ ಎಂಎಲ್ ಜೈಸಿಂಹ ಹಾಗೂ ಹಾಲಿ ಪ್ರಧಾನ ಕೋಚ್ ರವಿ ಶಾಸ್ತ್ರಿ ಎಲ್ಲ 5 ದಿನ ಆಡಿದ ಅಪರೂಪದ ಸಾಧನೆ ಮಾಡಿದ್ದರು. ಜೈಸಿಂಹ 1960ರಲ್ಲಿ ಆಸ್ಟ್ರೇಲಿಯ ವಿರುದ್ಧ, ಶಾಸ್ತ್ರಿ 1984ರಲ್ಲಿ ಇಂಗ್ಲೆಂಡ್‌ನ ವಿರುದ್ಧ ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News