ಶಾಟ್‌ಗನ್ ಚಾಂಪಿಯನ್‌ಶಿಪ್ : ಶ್ರೇಯಸಿಗೆ ಸ್ವರ್ಣ

Update: 2017-11-20 17:58 GMT

ಹೊಸದಿಲ್ಲಿ, ನ.20: ಇಲ್ಲಿ ನಡೆಯುತ್ತಿರುವ 61ನೇ ಆವೃತ್ತಿಯ ರಾಷ್ಟ್ರೀಯ ಶಾಟ್‌ಗನ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಮಹಿಳೆಯರ ಡಬಲ್ ಟ್ರಾಪ್ ಇವೆಂಟ್‌ನಲ್ಲಿ ಶ್ರೇಯಸಿ ಸಿಂಗ್ ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಟೂರ್ನಿಯಲ್ಲಿ ಎರಡನೇ ವೈಯಕ್ತಿಕ ಪದಕ ಜಯಿಸಿದ್ದಾರೆ.

ಶ್ರೇಯಸಿ ಮಹಿಳೆಯರ ಟ್ರಾಪ್ ಇವೆಂಟ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

 ಟೂರ್ನಿಯಲ್ಲಿ ಬಿಹಾರವನ್ನು ಪ್ರತಿನಿಧಿಸಿರುವ ಶ್ರೇಯಸಿ, ಮಧ್ಯಪ್ರದೇಶದ ವರ್ಷಾ ವರ್ಮನ್‌ರನ್ನು 92-87 ಅಂತರದಿಂದ ಸೋಲಿಸಿ ಮೊದಲ ಸ್ಥಾನ ಪಡೆದರು. ಮಹಿಳೆಯರ ಟ್ರ್ಯಾಪ್ ಇವೆಂಟ್‌ನಲ್ಲಿ ಚಿನ್ನ ಜಯಿಸಿದ್ದ ಶಾಗುನ್ ಚೌಧರಿ 84 ಅಂಕ ಗಳಿಸಿ ಮೂರನೇ ಸ್ಥಾನ ಪಡೆದರು.

ಜೂನಿಯರ್ ಮಹಿಳಾ ಡಬಲ್ ಟ್ರಾಪ್‌ನಲ್ಲಿ ಹರ್ಯಾಣದ ಭಾವನಾ ಚೌಧರಿ ಮಧ್ಯಪ್ರದೇಶದ ಮನಿಶಾ ಕೀರ್‌ರನ್ನು 79-75 ರಿಂದ ಸೋಲಿಸಿ ಚಿನ್ನ ಗೆದ್ದುಕೊಂಡರು. ದಿಲ್ಲಿಯ ದಿವ್ಯಾ ಸಿಂಗ್(70)ಕಂಚಿಗೆ ತೃಪ್ತಿಪಟ್ಟರು.

ಮಹಿಳಾ ಡಬಲ್ ಟ್ರಾಪ್‌ನ ಹಿರಿಯರ ಹಾಗೂ ಕಿರಿಯರ ಟೀಮ್ ಇವೆಂಟ್‌ನಲ್ಲಿ ಮನಿಶಾ ಡಬಲ್ ಗೋಲ್ಡ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News