ಇದು ಕ್ರಿಕೆಟ್ ಇತಿಹಾಸದಲ್ಲೇ ‘ವಿಚಿತ್ರ ಶಾಟ್‘

Update: 2017-11-21 15:24 GMT

ಕೆಲವೊಮ್ಮೆ ಕ್ರಿಕೆಟ್ ಮೈದಾನವು ವಿಚಿತ್ರ ಘಟನೆಗಳಿಗೆ, ಕ್ರಿಕೆಟಿಗರು ಒಬ್ಬರನ್ನೊಬ್ಬರು ಕಾಲೆಳೆಯುವುದಕ್ಕೆ, ಪರಸ್ಪರ ನಿಂದಿಸುವುದಕ್ಕೆ ಸಾಕ್ಷಿಯಾಗುತ್ತದೆ. ಕ್ರಿಕೆಟ್ ಆಟದಲ್ಲಿ ವಿಚಿತ್ರ ಬೌಲಿಂಗ್, ಬ್ಯಾಟಿಂಗ್ ಶೈಲಿಯಿಂದ ಗಮನ ಸೆಳೆದ ಹಲವರಿದ್ದಾರೆ. ಆದರೆ ಶ್ರೀಲಂಕಾದಲ್ಲಿ ನಡೆದ ಕ್ಲಬ್ ಪಂದ್ಯವೊಂದರಲ್ಲಿ ಶ್ರೀಲಂಕಾ ಆಟಗಾರ ಚಾಮರ ಸಿಲ್ವ ಮಾಡಿದ ಬ್ಯಾಟಿಂಗ್ ಶೈಲಿಯೊಂದು ‘ವಿಚಿತ್ರಗಳಲ್ಲೇ ವಿಚಿತ್ರ’ದಂತಿದೆ.

ಕೊಲಂಬೋದ ಪಿ. ಸಾರಾ ಓವಲ್ ನಲ್ಲಿ ಎಂಎಎಸ್ ಉನಿಚೆಲಾ ಹಾಗು ತೀಜೇ ಲಂಕಾ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಈ ಸಂದರ್ಭ ಬ್ಯಾಟಿಂಗ್ ಮಾಡುತ್ತಿದ್ದ ಚಾಮರ ಸಿಲ್ವ ಶಾಟೊಂದನ್ನು ಹೊಡೆಯಲು ಮುಂದಾದರು. ಸ್ಕೂಪ್ ಅಲ್ಲದ, ರಿವರ್ಸ್ ಸ್ವೀಪ್ ಅಲ್ಲದ ಈ ಶಾಟ್ ಅನ್ನು ಇದುವರೆಗೂ ಯಾವ ಕ್ರಿಕೆಟಿಗನೂ ಪ್ರಯತ್ನಿಸಿರಲು ಸಾಧ್ಯವಿಲ್ಲ. ಏಕೆಂದರೆ ಕ್ರೀಸ್ ನಲ್ಲಿದ್ದ ಸಿಲ್ವ ಬೌಲರ್ ಬೌಲಿಂಗ್ ಮಾಡಿದಾಗ ವಿಕೆಟ್ ನ ಹಿಂಬದಿ ಹೋಗಿ ಕೀಪರ್ ಗಿಂತ ಸ್ವಲ್ಪ ಮುಂದೆ ಬಾಲ್ ಗಾಗಿ ಕಾದು ನಿಂತಿದ್ದರು.

ಆದರೆ ದುರದೃಷ್ಟವಶಾತ್ ಬಾಲ್ ವಿಕೆಟ್ ಗಳನ್ನು ಉರುಳಿಸಿತ್ತು. ಚಾಮರ ಸಿಲ್ವರ ಬ್ಯಾಟಿಂಗ್ ಶೈಲಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News