ಹಾಂಕಾಂಗ್ ಓಪನ್ ಸೂಪರ್ ಸಿರೀಸ್ : ಸಿಂಧುಗೆ ಬೆಳ್ಳಿ

Update: 2017-11-26 09:27 GMT

ಹಾಂಕಾಂಗ್, ನ.26: ಇಲ್ಲಿ ನಡೆಧ ಹಾಂಕಾಂಗ್ ಓಪನ್ ಸೂಪರ್‌ ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ವನಿತೆಯರ ಸಿಂಗಲ್ಸ್ ನ  ಫೈನಲ್‌ನಲ್ಲಿ ಭಾರತದ ಪಿ.ವಿ. ಸಿಂಧು ಸೋಲು ಅನುಭವಿಸಿ ಬೆಳ್ಳಿ ಪಡೆದಿದ್ದಾರೆ.

 ಸಿಂಧು ಅವರು ಫೈನಲ್‌ನಲ್ಲಿ ತೈವಾನ್‌ನ ತೈ ಝು ಯಿಂಗ್ ವಿರುದ್ಧ 18-21, 18-21 ಅಂತರದಲ್ಲಿ ಸೋಲು ಅನುಭವಿಸಿ ಪ್ರಶಸ್ತಿ ಎತ್ತುವ ಅವಕಾಶ ಕಳೆದುಕೊಂಡರು.

ಸತತ ಎರಡನೇ ಬಾರಿ ಸಿಂಧು ಅವರು ತೈ ಝು ಯಿಂಗ್ ವಿರುದ್ಧ ಫೈನಲ್‌ನಲ್ಲಿ ಸೋತು ಪ್ರಶಸ್ತಿಯನ್ನು ಮುಡಿಗೇರಿಸುವಲ್ಲಿ ಎಡವಿದ್ದಾರೆ.

ಸಿಂಧು ಅವರು ಸೆಮಿಫೈನಲ್‌ನಲ್ಲಿ ಥಾಯ್‌ಲ್ಯಾಂಡ್‌ನ ರಚನಾಕ್ ಇಂತನಾನ್ ವಿರುದ್ಧ 21-17, 21-17 ಅಂತರದಲ್ಲಿ ಜಯ ಗಳಿಸಿ ಫೈನಲ್ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News