×
Ad

ರೋಹಿತ್ ಶರ್ಮ 3ನೇ ಶತಕ

Update: 2017-11-26 16:03 IST

ನಾಗ್ಪುರ, ನ.26: ರೋಹಿತ್ ಶರ್ಮ ಶ್ರೀಲಂಕಾ ವಿರುದ್ಧದ ದ್ವಿತೀಯ ಕ್ರಿಕೆಟ್ ಟೆಸ್ಟ್‌ನಲ್ಲಿ ಶತಕ ದಾಖಲಿಸಿದರು.
 ರೋಹಿತ್ ಶರ್ಮ 22ನೇ ಟೆಸ್ಟ್‌ನಲ್ಲಿ 3ನೇ ಶತಕ ಬಾರಿಸಿದರು. ಭಾರತದ ಮೊದಲ ಇನಿಂಗ್ಸ್ ನಲ್ಲಿ 160 ಎಸೆತಗಳಲ್ಲಿ 8ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ರೋಹಿತ್ ಶರ್ಮ ಶತಕ ಪೂರೈಸಿದರು.

ಶರ್ಮ ಶತಕ ದಾಖಲಿಸಿದ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಕೈಗೊಂಡರು.

ಭಾರತ ಮೊದಲ ಇನಿಂಗ್ಸ್‌ನಲ್ಲಿ 176.1 ಓವರ್ ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 610 ರನ್ ಗಳಿಸಿದ್ದು, 405 ರನ್‌ಗಳ ಮುನ್ನಡೆ ಸಾಧಿಸಿದೆ.
ವಿರಾಟ್ ಕೊಹ್ಲಿ ದ್ವಿಶತಕ (213), ಚೇತೇಶ್ವರ ಪೂಜಾರ (143), ಮುರಳಿ ವಿಜಯ್ (128) ಮತ್ತು ರೋಹಿತ್ ಶರ್ಮಾ (ಔಟಾಗದೆ 102) ಶತಕ ದಾಖಲಿಸಿದ್ದಾರೆ.
ಶ್ರೀಲಂಕಾದ ದಿಲ್ರುವಾನ್  ಪೆರೆರಾ 202ಕ್ಕೆ 3 ವಿಕೆಟ್, ಗಾಮಗೆ, ಹೆರಾತ್ ಮತ್ತು ಶನಕ ತಲಾ 1 ವಿಕೆಟ್ ಹಂಚಿಕೊಂಡರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News