ಪಾಕ್‌ನಲ್ಲಿ ಪದೇ ಪದೇ ಪ್ರಜಾಸತ್ತೆಯ ಕೊಲೆ: ಶರೀಫ್

Update: 2017-11-29 17:02 GMT

ಇಸ್ಲಾಮಾಬಾದ್, ನ. 29: ಪಾಕಿಸ್ತಾನದಲ್ಲಿ ಪ್ರಜಾಸತ್ತೆಯನ್ನು ಪದೇ ಪದೇ ಕೊಲೆಗೈಯಲಾಗುತ್ತಿದೆ ಎಂದು ಹೇಳಿರುವ ಮಾಜಿ ಪ್ರಧಾನಿ ನವಾಝ್ ಶರೀಫ್, ಅಲ್ಲಿ ಪ್ರಧಾನಿಗಳನ್ನು ವಜಾಗೊಳಿಸಲಾಗುತ್ತದೆ, ನೇಣಿಗೇರಿಸಲಾಗುತ್ತದೆ, ಬಂಧಿಸಲಾಗುತ್ತದೆ ಹಾಗೂ ದೇಶಭ್ರಷ್ಟರನ್ನಾಗಿಸಲಾಗುತ್ತಿದೆ ಎಂದು ವಿಷಾದಿಸಿದ್ದಾರೆ.

ಇಲ್ಲಿನ ‘ಪಂಜಾಬ್ ಹೌಸ್’ನಲ್ಲಿ ಮಂಗಳವಾರ ತನ್ನ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ (ಪಿಎಂಎಲ್-ಎನ್) ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶರೀಫ್, 70 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ನಡೆದ ಘಟನಾವಳಿಗಳು ‘ದುರದೃಷ್ಟಕರ’ ಎಂದರು.

ತನ್ನ ದೇಶದಲ್ಲಿ ಅಧಿಕಾರಕ್ಕಾಗಿ ಸೇನೆ ಮತ್ತು ಚುನಾಯಿತ ಪ್ರತಿನಿಧಿಗಳ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಶರೀಫ್ ಮಾತನಾಡಿದ್ದರೆ ಎಂಬುದಾಗಿ ಭಾವಿಸಲಾಗಿದೆ.

ನಾಗರಿಕರ ಆಳ್ವಿಕೆಯಲ್ಲಿರುವ ದೇಶಗಳು ಪ್ರಜಾಸತ್ತಾತ್ಮಕ ವೌಲ್ಯಗಳನ್ನು ಅನುಸರಿಸುವ ಮೂಲಕ ಅಭಿವೃದ್ಧಿ ಹೊಂದಿವೆ, ಆದರೆ, ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವವನ್ನು ಪದೇ ಪದೇ ಕೊಲೆಗೈಯಲಾಗಿದೆ ಎಂಬುದಾಗಿ ಪದಚ್ಯುತ ಪ್ರಧಾನಿ ಹೇಳಿದ್ದಾರೆ ಎಂದು ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News