×
Ad

ಜಾವಾ ದ್ವೀಪದಲ್ಲಿ ಚಂಡಮಾರುತ: 19 ಸಾವು

Update: 2017-11-29 22:40 IST

ಜಕಾರ್ತ, ನ. 29: ಇಂಡೋನೇಶ್ಯದ ಜಾವಾ ದ್ವೀಪಕ್ಕೆ ಅಪ್ಪಳಿಸಿದ ಚಂಡಮಾರುತದಿಂದಾಗಿ 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ. ಈ ಪೈಕಿ ಹೆಚ್ಚಿನವರು ಭೂಕುಸಿತದಿಂದಾಗಿ ಮೃತಪಟ್ಟಿದ್ದಾರೆ.

‘‘19 ಮಂದಿ ಸಾವಿಗೀಡಾಗಿದ್ದಾರೆ ಹಾಗೂ ಸಾವಿರಾರು ಮನೆಗಳು ಜಲಾವೃತವಾಗಿವೆ’’ ಎಂದು ದೇಶದ ವಿಪತ್ತು ನಿರ್ವಹಣೆ ಸಂಸ್ಥೆಯ ವಕ್ತಾರರೊಬ್ಬರು ಬುಧವಾರ ಟ್ವಿಟರ್‌ನಲ್ಲಿ ತಿಳಿಸಿದರು.

ಎರಡು ಸಮೀಪದ ವಿಮಾನ ನಿಲ್ದಾಣಗಳನ್ನು ಕೊಂಚ ಅವಧಿಗೆ ಮುಚ್ಚಲಾಗಿತ್ತಾದರೂ, ಬಳಿಕ ಕಾರ್ಯಾರಂಭಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News