ಇರಾನ್‌ನಲ್ಲಿ ಮತ್ತೆ ಭೂಕಂಪ: 15 ಮಂದಿಗೆ ಗಾಯ

Update: 2017-12-12 17:18 GMT

ಟೆಹರಾನ್ (ಇರಾನ್), ಡಿ. 12: ಆಗ್ನೇಯ ಇರಾನ್‌ನ ಕರ್ಮನ್ ಪ್ರಾಂತದ ಹೊಜ್ಡಾಕ್ ಪಟ್ಟಣದಲ್ಲಿ ಮಂಗಳವಾರ ರಿಕ್ಟರ್ ಮಾಪಕದಲ್ಲಿ 6.2ರಷ್ಟಿದ್ದ ಪ್ರಬಲ ಭೂಕಂಪ ಸಂಭವಿಸಿದೆ. ಹಲವು ಮನೆಗಳು ಕುಸಿದಿದ್ದು 15 ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರಿ ಮಾಧ್ಯಮಗಳು ವರದಿ ಮಾಡಿವೆ.

57 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿದೆ.

ಇನ್ನೊಂದು ಭೂಕಂಪ ಸೋಮವಾರ ಪಶ್ಚಿಮ ಇರಾನ್‌ನಲ್ಲಿ ಸಂಭವಿಸಿದೆ. ಅದರ ತೀವ್ರತೆ 5.4ರಷ್ಟಿತ್ತು. ಇದೇ ವಲಯದಲ್ಲಿ ಕಳೆದ ತಿಂಗಳು 7.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿ ಕನಿಷ್ಠ 530 ಮಂದಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News