ಎರಡನೇ ಏಕದಿನ: ರೋಹಿತ್ ಶರ್ಮ ಶತಕ; ಭಾರತ 250/1

Update: 2017-12-13 09:22 GMT

ಮೊಹಾಲಿ, ಡಿ.13: ಭಾರತದ ಹಂಗಾಮಿ ನಾಯಕ ರೋಹಿತ್ ಶರ್ಮರ ಆಕರ್ಷಕ ಶತಕದ(ಅಜೇಯ 104) ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 40 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿ ಉತ್ತಮ ಮೊತ್ತದತ್ತ ದಾಪುಗಾಲಿಟ್ಟಿದೆ.

ರೋಹಿತ್ ಶರ್ಮ 16ನೇ ಶತಕ ದಾಖಲಿಸಿ ತಂಡವನ್ನು ಆಧರಿಸಿದ್ದಾರೆ. ಮೊದಲ ವಿಕೆಟ್‌ನಲ್ಲಿ ಶಿಖರ್ ಧವನ್(68ರನ್)ಅವರೊಂದಿಗೆ 115 ರನ್ ಸೇರಿಸಿ ಉತ್ತಮ ಆರಂಭ ನೀಡಿರುವ ರೋಹಿತ್ ಆನಂತರ ಶ್ರೇಯಸ್ ಅಯ್ಯರ್(ಅಜೇಯ 69) ಅವರೊಂದಿಗೆ 2ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 135 ರನ್ ಜೊತೆಯಾಟ ನಡೆಸಿದ್ದಾರೆ.

ಅಜೇಯ 104 ರನ್ (118 ಎಸೆತ, 9 ಬೌಂಡರಿ,1 ಸಿಕ್ಸರ್) ಗಳಿಸಿರುವ ರೋಹಿತ್ ಶರ್ಮ ಭಾರತದ ಪರ ಗರಿಷ್ಠ ಶತಕ ದಾಖಲಿಸಿದ 4ನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಸಚಿನ್ ತೆಂಡುಲ್ಕರ್(49), ವಿರಾಟ್ ಕೊಹ್ಲಿ(32) ಹಾಗೂ ಸೌರವ್ ಗಂಗುಲಿ(22) ಮೊದಲ ಮೂರು ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News