ಎರಡನೇ ಏಕದಿನ: ರೋಹಿತ್ ಶರ್ಮ ಡಬಲ್ ಸೆಂಚುರಿ; ಭಾರತ 392/4

Update: 2017-12-13 12:20 GMT

ಮೊಹಾಲಿ, ಡಿ.13: ಭಾರತದ ಹಂಗಾಮಿ ನಾಯಕ ರೋಹಿತ್ ಶರ್ಮರ ದ್ವಿಶತಕದ(ಅಜೇಯ 208) ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 392 ರನ್ ದಾಖಲಿಸಿದೆ.

ಬುಧವಾರ ಮೊಹಾಲಿ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ತಂಡ ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿತು.

3ನೇ ಬಾರಿ ದ್ವಿಶತಕ ಸಿಡಿಸಿದ ರೋಹಿತ್ ಶರ್ಮ ಭಾರತ ಬೃಹತ್ ಮೊತ್ತ ದಾಖಲಿಸಲು ನೆರವಾದರು. ಮೊದಲ ವಿಕೆಟ್‌ನಲ್ಲಿ ಶಿಖರ್ ಧವನ್(68ರನ್)ಅವರೊಂದಿಗೆ 115 ರನ್ ಸೇರಿಸಿ ಉತ್ತಮ ಆರಂಭ ನೀಡಿರುವ ರೋಹಿತ್ ಆನಂತರ ಶ್ರೇಯಸ್ ಅಯ್ಯರ್(88) ಅವರೊಂದಿಗೆ 2ನೇ ವಿಕೆಟ್‌ಗೆ 213 ರನ್ ಜೊತೆಯಾಟ ನಡೆಸಿದ್ದಾರೆ.

 ಅಜೇಯ 208 ರನ್(153 ಎಸೆತ, 13 ಬೌಂಡರಿ, 12 ಸಿಕ್ಸರ್) ಗಳಿಸಿರುವ ರೋಹಿತ್ ಶರ್ಮ ದ್ವಿಶತಕ ದಾಖಲಿಸಿದ ಭಾರತದ ಎರಡನೇ ನಾಯಕನಾಗಿದ್ದಾರೆ. ವೀರೇಂದ್ರ ಸೆಹ್ವಾಗ್ ಈ ಸಾಧನೆ ಮಾಡಿದ್ದರು.

16ನೇ ಶತಕ ಸಿಡಿಸಿರುವ ರೋಹಿತ್ ಗರಿಷ್ಠ ಶತಕ ದಾಖಲಿಸಿದ ಭಾರತದ 4ನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಸಚಿನ್ ತೆಂಡುಲ್ಕರ್(49), ವಿರಾಟ್ ಕೊಹ್ಲಿ(32) ಹಾಗೂ ಸೌರವ್ ಗಂಗುಲಿ(22) ಮೊದಲ ಮೂರು ಸ್ಥಾನದಲ್ಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News