ಭಾರತಕ್ಕೆ ಭರ್ಜರಿ ಜಯ

Update: 2017-12-13 14:04 GMT

ಮೊಹಾಲಿ, ಡಿ.13: ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ 141 ರನ್‌ಗಳ ಭರ್ಜರಿ ಜಯ ಗಳಿಸಿದೆ.

ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 1-1 ಸಮಬಲ ಸಾಧಿಸಿದೆ.

ಗೆಲುವಿಗೆ 393 ರನ್‌ಗಳ ಕಠಿಣ ಸವಾಲು ಪಡೆದಿದ್ದ ಶ್ರೀಲಂಕಾ ತಂಡ ನಿಗದಿತ 50 ಓವರ್‌ಗಳಲ್ಲಿ ಆ್ಯಂಜೆಲೊ ಮ್ಯಾಥ್ಯೂಸ್ ಶತಕ(ಔಟಾಗದೆ 111) ನೆರವಿನಲ್ಲಿ 8 ವಿಕೆಟ್ ನಷ್ಟದಲ್ಲಿ  251ರನ್ ಗಳಿಸಿತ್ತು.

 ಇದಕ್ಕೂ ಮೊದಲು ಭಾರತ ಹಂಗಾಮಿ ನಾಯಕ ರೋಹಿತ್ ಶರ್ಮಾ ದ್ವಿಶತಕ (ಔಟಾಗದೆ 208) ನೆರವಿನಲ್ಲಿ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 392 ರನ್ ಗಳಿಸಿತ್ತು.

ಭಾರತದ ಯುಜುವೇಂದ್ರ ಚಹಾಲ್ 60ಕ್ಕೆ 3 ವಿಕೆಟ್ ಉಡಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News