ಯುಎಇ ರ‍್ಯಾಲಿ ಚಾಂಪಿಯನ್‌ಶಿಪ್: ಸೈನಿ-ಮೂಸಾ ಶರೀಫ್‌ಗೆ ಪ್ರಶಸ್ತಿ

Update: 2017-12-15 13:25 GMT

ದುಬೈ, ಡಿ.15: ಸನೀಮ್ ಸೈನಿ ಹಾಗೂ ಮೂಸಾ ಶರೀಫ್ 2017ರ ಯುಎಇ ರ‍್ಯಾಲಿ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈ ಜೋಡಿ 5 ರ‍್ಯಾಲಿಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿ ಫ್ರಂಟ್ ವೀಲ್ ಡ್ರೈವ್ ಕ್ಲಾಸ್‌ನಲ್ಲಿ ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ್ದಾರೆ.

ಕಾಸರಗೋಡಿನ ಮೂಸಾ ಶರೀಫ್ ತನ್ನ 25 ವರ್ಷಗಳ ವೃತ್ತಿಜೀವನದಲ್ಲಿ 10ನೇ ಚಾಂಪಿಯನ್‌ಶಿಪ್‌ನ್ನು ಜಯಿಸಿದರು. ಪ್ರಸ್ತುತ ಅವರು ಗೌರವ್ ಗಿಲ್‌ರೊಂದಿಗೆ ಇಂಡಿಯನ್ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ಈ ಚಾಂಪಿಯನ್‌ಶಿಪ್‌ನಲ್ಲಿ ಎಂ ಸ್ಪೋರ್ಟ್ ಸಿದ್ಧಪಡಿಸಿರುವ ಫೋರ್ಡ್ ಫಿಯೆಸ್ಟಾವನ್ನು ಸನೀಮ್ ಹಾಗೂ ಮೂಸಾ ಶರೀಫ್ ಚಾಲನೆ ಮಾಡಿದ್ದರು.

2018ರ ಚಾಂಪಿಯನ್‌ಶಿಪ್ ಶಾರ್ಜಾದಲ್ಲಿ ಜನವರಿ 5 ರಂದು ಆರಂಭವಾಗಲಿದ್ದು, ಸನೀಮ್ ಹಾಗೂ ಶರೀಫ್ ಒಂದೇ ವಿಭಾಗದಲ್ಲಿ ಮುಂದುವರಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News