ಕಾಮನ್ ವೆಲ್ತ್ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಸುಶೀಲ್ ಕುಮಾರ್

Update: 2017-12-17 15:10 GMT

ಹೊಸದಿಲ್ಲಿ, ಡಿ.17: ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್ ನಲ್ಲಿ ನಡೆದ ಕಾಮನ್ ವೆಲ್ತ್ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಸುಶೀಲ್ ಕುಮಾರ್ ಚಿನ್ನದ ಪದಕ ಗೆದ್ದಿದ್ದಾರೆ.

ಮೂರು ವರ್ಷಗಳ ನಂತರ ಕುಸ್ತಿ ಕಣಕ್ಕಿಳಿದಿರುವ ಸುಶೀಲ್ ಕುಮಾರ್ ನ್ಯೂಝಿಲ್ಯಾಂಡ್ ನ ಆಕಾಶ್ ಖುಲ್ಲರ್ ರನ್ನು ಸೋಲಿಸುವ ಮೂಲಕ ಫೈನಲ್ ಪಂದ್ಯವನ್ನು ಗೆದ್ದರು.

ಗ್ಲಾಸ್ಗೋದಲ್ಲಿ 2014ರಲ್ಲಿ ನಡೆದಿದ್ದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನಂತರದ ಮೊದಲ ಅಂತಾರಾಷ್ಟ್ರೀಯ ಸಾಧನೆ ಇದಾಗಿದೆ. ಸುಶೀಲ್ ಕುಮಾರ್ ಮಾತ್ರವಲ್ಲದೆ ಭಾರತದ ಪರ್ವೀನ್ ರಾಣಾ ಕೂಡ 74 ಕೆ,ಜಿ. ಫ್ರೀ ಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News