ಬ್ರಿಟನ್: ಆಧುನಿಕ ಗುಲಾಮಗಿರಿಯಲ್ಲಿ 90 ಭಾರತೀಯರು

Update: 2017-12-20 16:47 GMT

ಲಂಡನ್, ಡಿ. 20: ಬ್ರಿಟನ್‌ನಲ್ಲಿ ಆಧುನಿಕ ಗುಲಾಮಗಿರಿಗೆ ಒಳಗಾಗಿದ್ದ 90 ಭಾರತೀಯರನ್ನು 2016ರಲ್ಲಿ ಪತ್ತೆಹಚ್ಚಲಾಗಿದೆ ಎಂದು ಪರಿಶೋಧನಾ ವರದಿಯೊಂದು ತಿಳಿಸಿದೆ.

ಭಾರತೀಯ ನಾಗರಿಕರು ‘ದೇಶಿ ಕೆಲಸಗಾರರ’ ವೀಸಾವನ್ನು ಬಳಸಿ ತಮ್ಮ ಉದ್ಯೋಗದಾತರೊಂದಿಗೆ ಇಂಗ್ಲೆಂಡ್‌ಗೆ ಹೋಗುತ್ತಾರೆ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಅವರು ಶೋಷಣೆಗೆ ಒಳಗಾಗುತ್ತಾರೆ ಹಾಗೂ ಅವರಿಗೆ ಕಡಿಮೆ ಸಂಬಳವನ್ನು ನೀಡಲಾಗುತ್ತದೆ.

ಬ್ರಿಟನ್‌ಗೆ ಬಂದ ಮೇಲೆ ಈ ಕೆಲಸಗಾರರಿಗೆ ಬೇರೆ ಕಡೆ ಕೆಲಸಕ್ಕೆ ಸೇರಲು ಸಾಧ್ಯವಾಗುವುದಿಲ್ಲ ಹಾಗೂ ಅಂತಿಮವಾಗಿ ಆಧುನಿಕ ಗುಲಾಮಗಿರಿಗೆ ಒಳಗಾಗುತ್ತಾರೆ.

ಬ್ರಿಟನ್‌ನಲ್ಲಿ ಇಂಥ ಸ್ಥಿತಿಗೆ ಒಳಗಾಗಿರುವವರ ಪಟ್ಟಿಯಲ್ಲಿ ಭಾರತ ಅಗ್ರ ಎಂಟರ ಸ್ಥಾನದಲ್ಲಿದೆ.

2013ರಲ್ಲಿ ಬ್ರಿಟನ್‌ನಲ್ಲಿದ್ದ ಆಧುನಿಕ ಗುಲಾಮಗಿರಿಯ ಬಲಿಪಶುಗಳ ಸಂಖ್ಯೆ 10,000 ಮತ್ತು 13,000ದ ನಡುವಿತ್ತು ಹಾಗೂ ಇದರಲ್ಲಿ ಭಾರತೀಯರೇ ಅಧಿಕ ಸಂಖ್ಯೆಯಲ್ಲಿದ್ದರು ಎಂದು ಬ್ರಿಟನ್ ಗೃಹ ಕಚೇರಿ ಅಂದಾಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News