ಉ. ಕೊರಿಯ ಪರಮಾಣು ಬಿಕ್ಕಟ್ಟು: ಕೆನಡದಲ್ಲಿ ವಿದೇಶ ಸಚಿವರ ಸಮ್ಮೇಳನ

Update: 2017-12-20 17:11 GMT

ಒಟ್ಟಾವ (ಕೆನಡ), ಡಿ. 20: ಉತ್ತರ ಕೊರಿಯದ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ, ಕೆನಡದ ವ್ಯಾಂಕೂವರ್‌ನಲ್ಲಿ ಜನವರಿ 16ರಂದು ವಿದೇಶ ಸಚಿವರ ಶೃಂಗ ಸಮ್ಮೇಳನವೊಂದನ್ನು ತಾವು ಜಂಟಿಯಾಗಿ ಏರ್ಪಡಿಸುವುದಾಗಿ ಕೆನಡ ಮತ್ತು ಅಮೆರಿಕ ಮಂಗಳವಾರ ಘೋಷಿಸಿವೆ.

‘‘ಪರಮಾಣು ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರವೊಂದು ಸಾಧ್ಯ ಹಾಗೂ ಅಗತ್ಯ ಎಂಬುದಾಗಿ ನಾವು ಭಾವಿಸಿದ್ದೇವೆ’’ ಎಂದು ಕೆನಡದ ವಿದೇಶ ಸಚಿವೆ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್ ಜೊತೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಶೃಂಗ ಸಮ್ಮೇಳನವು ತನ್ನ ಪರಮಾಣು ಕಾರ್ಯಕ್ರಮವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲು ಮಾತುಕತೆಯ ಮೇಜಿಗೆ ಬರುವಂತೆ ಉತ್ತರ ಕೊರಿಯದ ಮೇಲೆ ಇನ್ನಷ್ಟು ಒತ್ತಡವನ್ನು ಸೃಷ್ಟಿಸಲಿದೆ ಎಂದು ಟಿಲರ್‌ಸನ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News