400 ವಿಕೆಟ್ ಪಡೆದ ಮೊದಲ ಬೌಲರ್ ಡ್ವೆಯ್ನ್ ಬ್ರಾವೊ

Update: 2017-12-21 18:07 GMT

ಹೊಸದಿಲ್ಲಿ, ಡಿ.21: ವೆಸ್ಟ್‌ಇಂಡೀಸ್‌ನ ಆಲ್‌ರೌಂಡರ್ ಡ್ವೇಯ್ನ್ ಬ್ರಾವೊ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 400 ವಿಕೆಟ್‌ಗಳನ್ನು ಪಡೆದಿರುವ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆಸ್ಟ್ರೇಲಿಯದ ದೇಶೀಯ ಟ್ವೆಂಟಿ-20 ಟೂರ್ನಿ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಗುರುವಾರ ಮೆಲ್ಬೋರ್ನ್ ತಂಡದ ಪರ ಹೊಬರ್ಟ್ ತಂಡದ ವಿರುದ್ಧ 28 ರನ್‌ಗೆ 5 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಬ್ರಾವೊ ಹೊಸ ದಾಖಲೆ ನಿರ್ಮಿಸಿದ್ದಾರೆ.

ಬ್ರಾವೊ ಬೌಲಿಂಗ್ ಸಾಹಸದಿಂದ ಮೆಲ್ಬೋರ್ನ್ ತಂಡ ಹೊಬರ್ಟ್ ತಂಡವನ್ನು 20 ಓವರ್‌ಗಳಲ್ಲಿ 165 ರನ್‌ಗೆ ನಿಯಂತ್ರಿಸಿತ್ತು. ಇದಕ್ಕೆ ಉತ್ತರವಾಗಿ ಮೆಲ್ಬೋರ್ನ್ 18.3 ಓವರ್‌ಗಳಲ್ಲಿ ಗುರಿ ತಲುಪಿತು.

 ಬ್ರಾವೊ 20ನೇ ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸುವುದರೊಂದಿಗೆ 400 ವಿಕೆಟ್ ಮೈಲುಗಲ್ಲು ತಲುಪಿದರು. ಟ್ವೆಂಟಿ-20ಯಲ್ಲಿ 2ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.

34ರ ಹರೆಯದ ಬ್ರಾವೊ 2015ರಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದು ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಗಮನ ನೀಡಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News