×
Ad

ಬಹುಮಡಿ ಕಟ್ಟಡದಲ್ಲಿ ಬೆಂಕಿ; 29 ಸಾವು

Update: 2017-12-22 22:33 IST

ಸಿಯೋಲ್, ಡಿ. 22: ದಕ್ಷಿಣ ಕೊರಿಯದ ಜೆಚಿಯಾನ್ ನಗರದಲ್ಲಿರುವ ಎಂಟು ಮಹಡಿಗಳ ದೈಹಿಕ ಕ್ಷಮತೆ ಕೇಂದ್ರವೊಂದರಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅಪಘಾತದಲ್ಲಿ ಕನಿಷ್ಠ 29 ಮಂದಿ ಮೃತಪಟ್ಟಿದ್ದಾರೆ.

ಮೊದಲ ಮಹಡಿಯಲ್ಲಿ ನಿಲ್ಲಿಸಲಾಗಿದ್ದ ಕಾರೊಂದರಲ್ಲಿ ಬೆಂಕಿ ಹೊತ್ತಿಕೊಂಡಿತು ಹಾಗೂ ಅದು ಇಡೀ ಕಟ್ಟಡವನ್ನು ವ್ಯಾಪಿಸಿತು ಎಂದು ಅಧಿಕಾರಿಯೊಬ್ಬರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.

ಮೃತಪಟ್ಟ ಕನಿಷ್ಠ 12 ಮಹಿಳೆಯರು ಮತ್ತು ಮೂವರು ಪುರುಷರನ್ನು ಗುರುತಿಸಲಾಗಿದೆ. ಆದರೆ, 13 ದೇಹಗಳನ್ನು ಗುರುತಿಸಲು ಸಾಧ್ಯವಾಗಿಲ್ಲ.

ಇನ್ನಷ್ಟು ದೇಹಗಳನ್ನು ಕಟ್ಟಡದಿಂದ ಹೊರದೆಗೆಯಲಾಗುತ್ತಿದ್ದು, ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News