ಅಮೆರಿಕದ ಯಾವುದೇ ಶಾಂತಿ ಪ್ರಸ್ತಾಪವನ್ನು ಫೆಲೆಸ್ತೀನ್ ಜನತೆ ಸ್ವೀಕರಿಸುವುದಿಲ್ಲ: ಅಧ್ಯಕ್ಷ ಮಹ್ಮೂದ್ ಅಬ್ಬಾಸ್

Update: 2017-12-22 17:22 GMT

ಪ್ಯಾರಿಸ್, ಡಿ. 22: ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಅಮೆರಿಕ ಏಕಪಕ್ಷೀಯವಾಗಿ ಮಾನ್ಯ ಮಾಡಿದ ಬಳಿಕ, ಆ ದೇಶದ ಯಾವುದೇ ಶಾಂತಿ ಪ್ರಸ್ತಾಪವನ್ನು ಫೆಲೆಸ್ತೀನ್ ಜನತೆ ಇನ್ನು ಮುಂದೆ ಸ್ವೀಕರಿಸುವುದಿಲ್ಲ ಎಂದು ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಶುಕ್ರವಾರ ಹೇಳಿದ್ದಾರೆ.

ಟ್ರಂಪ್ ಆಡಳಿತವು ಗುಪ್ತವಾಗಿ ಇಸ್ರೇಲ್-ಫೆಲೆಸ್ತೀನ್ ಶಾಂತಿ ಯೋಜನೆಯೊಂದನ್ನು ಸಿದ್ಧಪಡಿಸುತ್ತಿದೆ ಎಂದು ಹೇಳಲಾಗಿದೆ. ಅದನ್ನು ಅಮೆರಿಕ 2018ರಲ್ಲಿ ಉಭಯ ಬಣಗಳ ಮುಂದಿಡುವುದು ಎಂದು ನಿರೀಕ್ಷಿಸಲಾಗಿದೆ.

‘‘ಅಮೆರಿಕವು ಶಾಂತಿ ಪ್ರಕ್ರಿಯೆಯಲ್ಲಿನ ಅಪ್ರಾಮಾಣಿಕ ಮಧ್ಯಸ್ಥಿಕೆದಾರ ಎನ್ನುವುದು ಸಾಬೀತಾಗಿದೆ. ಹಾಗಾಗಿ, ಅಮೆರಿಕ ಮುಂದಿಡುವ ಯಾವುದೇ ಶಾಂತಿ ಪ್ರಸ್ತಾಪವನ್ನು ನಾವು ಇನ್ನು ಮುಂದೆ ಸ್ವೀಕರಿಸುವುದಿಲ್ಲ’’ ಎಂದು ಪ್ಯಾರಿಸ್‌ನಲ್ಲಿ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್‌ರನ್ನು ಭೇಟಿಯಾದ ಬಳಿಕ ಅಬ್ಬಾಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News