26 ಎಸೆತಗಳಲ್ಲಿ ಶತಕ ಸಿಡಿಸಿದ ಬಾಬರ್!

Update: 2017-12-25 14:40 GMT

ಕರಾಚಿ, ಡಿ.25: ಹತ್ತು ಓವರ್‌ಗಳ ಕ್ರಿಕೆಟ್ ಈಗಾಗಲೇ ವಿಶ್ವದ ಗಮನ ಸೆಳೆದಿದೆ. ಫೈಸ್ಲಾಬಾದ್‌ನಲ್ಲಿ ಶಾಹಿದ್ ಅಫ್ರಿದಿ ಫೌಂಡೇಶನ್ ಆಯೋಜಿಸಿದ್ದ ಟಿ-10 ಚಾರಿಟಿ ಕ್ರಿಕೆಟ್ ಪಂದ್ಯದಲ್ಲಿ ಪಾಕ್ ಆಟಗಾರರಾದ ಬಾಬರ್ ಆಝಂ ಹಾಗೂ ಶುಐಬ್ ಮಲಿಕ್ ಶ್ರೇಷ್ಠ ಪ್ರದರ್ಶನದಿಂದ ಎಲ್ಲರ ಗಮನ ಸೆಳದಿದ್ದಾರೆ.

 ಮಲಿಕ್ ಅವರು ಬಾಬರ್ ಎಸೆದ ಓವರ್‌ನಲ್ಲಿ ಸತತ 6 ಸಿಕ್ಸರ್ ಸಿಡಿಸಿ ಯುವರಾಜ್ ಸಾಧನೆಯನ್ನು ನೆನಪಿಸಿದರು. ಮಲಿಕ್ ವಿರುದ್ಧ ತಕ್ಕ ಸೇಡು ತೀರಿಸಿಕೊಂಡ ಬಾಬರ್ ಕೇವಲ 26 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 7 ಬೌಂಡರಿ ನೆರವಿನಿಂದ ಶತಕ ಪೂರೈಸಿ ತಂಡಕ್ಕೆ ರೋಚಕ ಗೆಲುವು ತಂದರು.

ಶಾಹಿದ್ ಫೌಂಡೇಶನ್ ಆಯೋಜಿಸಿದ್ದ ಟಿ-10 ಪಂದ್ಯದಲ್ಲಿ ಉಭಯ ತಂಡಗಳು 400ಕ್ಕೂ ಅಧಿಕ ರನ್ ಗಳಿಸಿವೆ.

 ಪಾಕ್‌ನ ಶ್ರೇಷ್ಠ ಏಕದಿನ ಬ್ಯಾಟ್ಸ್‌ಮನ್ ಆಗಿರುವ ಆಝಂ ಗ್ರೀನ್ ತಂಡದ ಪರ ಆಡಿದ್ದು, ಮಾಜಿ ನಾಯಕ ಶುಐಬ್ ಮಲಿಕ್ ರೆಡ್ ತಂಡವನ್ನು ಪ್ರತಿನಿಧಿಸಿದ್ದರು.

ಮೊದಲು ಬ್ಯಾಟಿಂಗ್ ಮಾಡಿದ್ದ ರೆಡ್ ತಂಡ ಮಲಿಕ್ ಅವರ ಸತತ ಆರು ಸಿಕ್ಸರ್‌ಗಳ ನೆರವಿನಿಂದ 10 ಓವರ್‌ಗಳಲ್ಲಿ 201 ರನ್ ಗಳಿಸಿತು. ಮಲಿಕ್ ಅವರು ಬಾಬರ್ ಎಸೆದ ಓವರೊಂದರಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದ್ದರು.

 ಇದಕ್ಕೆ ದಿಟ್ಟ ಉತ್ತರ ನೀಡಿದ ರೆಡ್ ತಂಡ ಬಾಬರ್ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 10 ಓವರ್‌ಗಳಲ್ಲಿ 210 ರನ್ ಗಳಿಸಿ 9 ವಿಕೆಟ್‌ಗಳ ಜಯ ದಾಖಲಿಸಿತು.

  ಆಝಂ ತಾಂತ್ರಿಕವಾಗಿ ಅತ್ಯಂತ ವೇಗದ ಶತಕ ಸಿಡಿಸಿದ್ದಾರೆ. ಆದರೆ, ಅವರು ಚಾರಿಟಿ ಪಂದ್ಯದಲ್ಲಿ ಈ ಸಾಧನೆ ಮಾಡಿದ ಕಾರಣ ಅದು ಅಧಿಕೃತವಾಗಿಲ್ಲ. ಯಾವುದೇ ದಾಖಲೆಯನ್ನು ಮುರಿದಿಲ್ಲ.

ಆರು ಸಿಕ್ಸ್ಸರ್ ಸಿಡಿಸಿದ ದಾಂಡಿಗರ ಪಟ್ಟಿಗೆ ಶುಐಬ್ ಮಲಿಕ್ ಸೇರ್ಪಡೆ 

ಪಾಕಿಸ್ತಾನ ಆಲ್‌ರೌಂಡರ್ ಶುಐಬ್ ಮಲಿಕ್ ಒಂದೇ ಓವರ್‌ನಲ್ಲಿ ಆರು ಸಿಕ್ಸ್ಸರ್ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಫೈಸ್ಲಾಬಾದ್‌ನಲ್ಲಿ ಶಾಹಿದ್ ಅಫ್ರಿದಿ ಫೌಂಡೇಶನ್ ಆಯೋಜಿಸಿದ್ದ ಟಿ-10 ಚಾರಿಟಿ ಪಂದ್ಯದಲ್ಲಿ ಮಲಿಕ್ ಈ ಸಾಧನೆ ಮಾಡಿದ್ದಾರೆ.

 ಬಲಗೈ ಬ್ಯಾಟ್ಸ್‌ಮನ್ ಮಲಿಕ್ ಶಾಹಿದ್ ಅಫ್ರಿದಿ ಫೌಂಡೇಶನ್ ರೆಡ್ ಟೀಮ್ ತಂಡದ ಪರ ಆಡಿದ್ದು, ಶಾಹಿದ್ ಅಫ್ರಿದಿ ಫೌಂಡೇಶನ್ ಗ್ರೀನ್ ಟೀಮ್ ವಿರುದ್ಧ ಈ ಸಾಧನೆ ಮಾಡಿದ್ದಾರೆ.

ಮಲಿಕ್ ಇನಿಂಗ್ಸ್‌ನ 7ನೇ ಓವರ್‌ನಲ್ಲಿ ಬಲಗೈ ಸ್ಪಿನ್ನರ್ ಬಾಬರ್ ಆಝಂ ಎಸೆತದಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದರು. ಮಲಿಕ್ ಸಾಹಸದ ನೆರವಿನಿಂದ ರೆಡ್ ಟೀಮ್ ನಿಗದಿತ 10 ಓವರ್‌ಗಳಲ್ಲಿ 201 ರನ್ ಗಳಿಸಿತು. ಆದರೆ ಪಂದ್ಯದಲ್ಲಿ ಜಯ ಸಾಧಿಸಲು ವಿಫಲವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News