ರೊಹಿಂಗ್ಯಾ ಮಹಿಳೆಯರ ಮೇಲಿನ ಅತ್ಯಾಚಾರಗಳ ಬಗ್ಗೆ ಚರ್ಚಿಸದ ಸೂ ಕಿ

Update: 2017-12-27 16:27 GMT

ನೇಪಿಡಾ, ಡಿ.27: ಇತ್ತೀಚೆಗೆ ಮ್ಯಾನ್ಮಾರ್‌ನಲ್ಲಿ ಸೇನೆ ಮತ್ತು ಪೊಲೀಸರಿಂದ ಅತ್ಯಾಚಾರಕ್ಕೀಡಾದ ರೊಹಿಂಗ್ಯಾ ಮಹಿಳೆಯರು ಮತ್ತು ಯುವತಿಯರ ಬಗ್ಗೆ ಮ್ಯಾನ್ಮಾರ್ ಮುಖ್ಯಸ್ಥೆ ಆಂಗ್ ಸಾನ್ ಸೂ ಕಿ ಸಂಯುಕ್ತರಾಷ್ಟ್ರದ ಅಧಿಕಾರಿಗಳ ಜೊತೆ ನಡೆಸಿದ ಸಮಾಲೋಚನೆಯ ವೇಳೆ ಮೌನವಾಗಿದ್ದರು ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

ಸಂಘರ್ಷಪೀಡಿತ ಪ್ರದೇಶಗಳಲ್ಲಿ ಲೈಂಗಿಕ ಹಿಂಸಾಚಾರ ಸಮೀಕ್ಷೆಯ ವಿಶೇಷ ಪ್ರತಿನಿಧಿ ಪ್ರಮಿಳಾ ಪತ್ತೆನ್ ಮಧ್ಯ ಡಿಸೆಂಬರ್‌ನಲ್ಲಿ ಮ್ಯಾನ್ಮಾರ್‌ಗೆ ತೆರಳಿ ಈ ವಿಷಯದ ಬಗ್ಗೆ ಸರಕಾರಿ ಅಧಿಕಾರಿಗಳಲ್ಲಿ ಪ್ರಸ್ತಾಪ ಮಾಡಿದ್ದರು. ಆದರೆ ಮ್ಯಾನ್ಮಾರ್ ಸರಕಾರದಲ್ಲಿ ಮುಖ್ಯ ಸಲಹೆಗಾರರಾಗಿರುವ ಸೂ ಕಿ ಈ ವಿಷಯದಲ್ಲಿ ಚರ್ಚೆ ನಡೆಸಲು ನಿರಾಕರಿಸಿದರು ಎಂದು ಪತ್ರಿಕೆ ವರದಿ ಮಾಡಿದೆ.

ಆಗಸ್ಟ್‌ನಲ್ಲಿ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ 65,000ಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಸಮೀಪದ ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಿಗೆ ವಲಸೆ ಹೋಗಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News