ಡಮಾಸ್ಕಸ್‌ನಿಂದ ವೈದ್ಯಕೀಯ ತೆರವು ಆರಂಭ

Update: 2017-12-27 16:28 GMT

ಡಮಾಸ್ಕಸ್, ಡಿ.27: ಬಂಡುಕೋರರು ನಿಯಂತ್ರಣ ಸಾಧಿಸಿರುವ ಪೂರ್ವ ಡಮಾಸ್ಕಸ್‌ನಿಂದ ರೋಗಿಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಸಿರಿಯನ್ ರೆಡ್ ಕ್ರೆಸೆಂಟ್ ಮತ್ತು ರೆಡ್‌ಕ್ರಾಸ್‌ನ ಅಂತಾರಾಷ್ಟ್ರೀಯ ಸಮಿತಿ ತಮ್ಮ ಅಧಿಕೃತ ಟ್ವಿಟರ್ ಖಾತೆಗಳಲ್ಲಿ ಮಂಗಳವಾರ ತಿಳಿಸಿದೆ.

ಪೂರ್ವ ಗೋಟಾದಿಂದ ಮೊದಲ ರೋಗಿಯನ್ನು ಸ್ಥಳಾಂತರಿಸಲಾಗಿದ್ದು, 40,000 ಜನಸಂಖ್ಯೆಯುಳ್ಳ ಈ ಪ್ರದೇಶ ಬಂಡುಕೋರರ ನಿಯಂತ್ರಣದಲ್ಲಿದೆ. ಆರು ವರ್ಷಗಳ ಹಿಂದೆ ಆಂತರಿಕ ಯುದ್ಧ ಆರಂಭವಾದಂದಿನಿಂದ ಈ ಪ್ರದೇಶದಲ್ಲಿ ಅತೀಹೆಚ್ಚು ಮಕ್ಕಳು ಅಪೌಷ್ಟಿಕತೆಗೆ ಬಲಿಯಾಗುತ್ತಿದ್ದಾರೆ ಎಂದು ಸಂಯುಕ್ತರಾಷ್ಟ್ರ ಪ್ರತಿನಿಧಿಗಳು ಎಚ್ಚರಿಸಿದ್ದಾರೆ. ಇದೇ ವೇಳೆ ಸಾವಿರಾರು ಜನರಿಗೆ ತುರ್ತು ವೈದ್ಯಕೀಯ ನೆರವಿನ ಅಗತ್ಯವಿದೆ ಎಂದು ವರದಿ ಮಾಡಲಾಗಿದೆ.

ಸಿರಿಯಾ ಸರಕಾರದ ಜೊತೆ ನಡೆಸಿದ ಸುದೀರ್ಘ ಚರ್ಚೆಯ ನಂತರ ಸ್ಥಳಾಂತರ ಕಾರ್ಯ ಆರಂಭಿಸಲಾಗಿದೆ. ಈ ಪ್ರದೇಶದಲ್ಲಿ ರೋಗಿಗಳ ಸಂಖ್ಯೆ ಮಿತಿಮೀರಿದೆ ಎಂದು ಸಿರಿಯನ್ ಅಮೆರಿಕನ್ ವೈದ್ಯಕೀಯ ಸಂಸ್ಥೆ ಹೇಳಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News