ಆಸ್ಟ್ರೇಲಿಯದಲ್ಲಿ ಸೀಪ್ಲೇನ್ ಪತನ: ಕನಿಷ್ಠ 6 ಬಲಿ

Update: 2017-12-31 17:06 GMT

ಸಿಡ್ನಿ,ಡಿ.31: ಆಸ್ಟ್ರೇಲಿಯದಲ್ಲಿ ಸೀಪ್ಲೇನ್ ಒಂದು ನದಿಯಲ್ಲಿ ಪತನಗೊಂಡು ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ಸಿಡ್ನಿ ನಗರದಿಂದ 50 ಕಿ.ಮೀ. ದೂರದ ಕೊವಾನ್ ಬಳಿ ಸೀಪ್ಲೇನ್ ಪತನಗೊಂಡಿದೆ ಎಂದು ನ್ಯೂಸೌತ್‌ವೇಲ್ಸ್‌ನ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಹಾಗೂ ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದು, ಈವರೆಗೆ ಮೂರು ಶವಗಳನ್ನು ಮೇಲೆತ್ತಲಾಗಿದೆಯೆಂದು ಅವರು ಹೇಳಿದ್ದಾರೆ. ವಿಮಾನದ ಪ್ರಯಾಣಿಕರು ಗುರುತನ್ನಾಗಲಿ, ದುರಂತದ ಕಾರಣವನ್ನಾಗಲಿ ಪೊಲೀಸರು ಈವರೆಗೆ ಬಹಿರಂಗಪಡಿಸಿಲ್ಲ.

ಪತನಗೊಂಡ ಡಿಎಚ್‌ಸಿ-2 ಬೀವರ್ ಮಾದರಿಯ ಸೀಪ್ಲೇನ್ ವಿಮಾನವು ಸಿಡ್ನಿ ಬಂದರಿನಲ್ಲಿರುವ ರೋಸ್‌ಬೇ ಪ್ರದೇಶಕ್ಕೆ ವಾಪಾಸಾಗುತ್ತಿದ್ದಾಗ ಪತನಗೊಂಡಿತೆಂದು ಆಸ್ಟ್ರೇಲಿಯದ ಸಾರಿಗೆ ಸುರಕ್ಷತೆ ವಿಭಾಗದ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News