×
Ad

ಬೌನ್ಸರ್ ರಭಸಕ್ಕೆ ಹಾರಿಹೋಯ್ತು ಬ್ಯಾಟ್ಸ್ ಮ್ಯಾನ್ ನ ಹೆಲ್ಮೆಟ್

Update: 2018-01-02 22:28 IST

ಮೆಲ್ಬೋರ್ನ್, ಜ.2: ಮಂಗಳವಾರ ನಡೆದ ಬಿಗ್ ಬ್ಯಾಶ್ ಲೀಗ್ ಕ್ರಿಕೆಟ್ ಪಂದ್ಯವೊಂದರಲ್ಲಿ ಬೌನ್ಸರ್ ಒಂದರ ರಭಸಕ್ಕೆ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕ ಜಾನ್ ಹಾಸ್ಟಿಂಗ್ಸ್ ರ ಹೆಲ್ಮೆಟ್ ಮೇಲಕ್ಕೆ ಚಿಮ್ಮಿದ ಘಟನೆ ನಡೆದಿದೆ.

ಬ್ರಿಸ್ಬೇನ್ ಹೀಟ್ ವಿರುದ್ಧದ ಪಂದ್ಯದಲ್ಲಿ ಕ್ರೀಸ್ ನಲ್ಲಿ ಮೊದಲ ಬಾಲನ್ನು ಹಾಸ್ಟಿಂಗ್ಸ್ ಎದುರಿಸಿದ್ದು, ಬೆನ್ ಕಟ್ಟಿಂಗ್ ರ ಬೌನ್ಸರ್ ಹಾಸ್ಟಿಂಗ್ಸ್ ರ ಹೆಲ್ಮೆಟ್ ಗೆ ಅಪ್ಪಳಿಸಿದ್ದು, ಬೌನ್ಸರ್ ರಭಸಕ್ಕೆ ಹೆಲ್ಮೆಟ್ ಹಾರಿದೆ.

ಕೂಡಲೇ ಕಟ್ಟಿಂಗ್ ಹಾಸ್ಟಿಂಗ್ಸ್ ರ ಬಳಿ ತೆರಳಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಟ್ವಿಟರ್ ನಲ್ಲಿ ಈ ಬಗ್ಗೆ ಜೋಕ್ ಗಳು ಹರಿದಾಡುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News