ಆಫ್ರಿಕ ಕ್ಲೀನ್ ಸ್ವೀಪ್ ಮಾಡಿದರೂ ಭಾರತದ ನಂ.1 ಸ್ಥಾನ ಭದ್ರ

Update: 2018-01-03 19:01 GMT

ದುಬೈ, ಜ.3: ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಭಾರತ ತಂಡ 3-0 ಅಂತರದಲ್ಲಿ ಟೆಸ್ಟ್ ಸರಣಿ ಸೋತರೂ, ನಂ.1 ಸ್ಥಾನ ಕೈ ಜಾರದು.

ದಕ್ಷಿಣ ಆಫ್ರಿಕ ಇದೀಗ ಭಾರತಕ್ಕಿಂತ 13 ಪಾಯಿಂಟ್‌ಗಳಷ್ಟು ಹಿಂದೆ ಇದೆ. ಮೂರು ಟೆಸ್ಟ್‌ಗಳನ್ನು ಜಯಿಸಿದರೆ ಭಾರತ ಮತ್ತು ದಕ್ಷಿಣ ಆಫ್ರಿಕ ಪಾಯಿಂಟ್ಸ್‌ನಲ್ಲಿ ಸಮಬಲ ಸಾಧಿಸಲಿವೆ. ಭಾರತ 124 ಪಾಯಿಂಟ್ಸ್‌ಗಳೊಂದಿಗೆ ನಂ.1 ಸ್ಥಾನದಲ್ಲಿದ್ದರೆ ದಕ್ಷಿಣ ಆಫ್ರಿಕ 111 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಸರಣಿ ಕ್ಲೀನ್ ಸ್ವೀಪ್ ಸಾಧಿಸಿದರೆ ದಕ್ಷಿಣ ಆಫ್ರಿಕ 6.53 ಪಾಯಿಂಟ್ಸ್‌ಗಳನ್ನು ತನ್ನ ಖಾತೆಗೆ ಸೇರಿಸಿಕೊಳ್ಳಲಿದೆ. ಇದರೊಂದಿಗೆ ದಕ್ಷಿಣ ಆಫ್ರಿಕದ ಪಾಯಿಂಟ್ಸ್ 117.53ಕ್ಕೇರಲಿದೆ. ಇದೇ ವೇಳೆ ಭಾರತ 5.53 ಪಾಯಿಂಟ್ಸ್‌ಗಳನ್ನು ಕಳೆದುಕೊಳ್ಳಲಿದೆ.ಭಾರತ 118.47 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಳ್ಳಲಿದೆ.

  ಒಂದು ವೇಳೆ ಭಾರತ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದರೆ ತನ್ನ ಖಾತೆಗೆ 4 ಪಾಯಿಂಟ್ಸ್‌ಗಳನ್ನು ಸೇರಿಸಿಕೊಳ್ಳಲಿದೆ. ಇದೇ ವೇಳೆ ದಕ್ಷಿಣ ಆಫ್ರಿಕ 4 ಪಾಯಿಂಟ್ಸ್‌ಗಳನ್ನು ಕಳೆದುಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News