ಕೊಹ್ಲಿ ಐಪಿಎಲ್‌ನ ಇತಿಹಾಸದಲ್ಲೇ ದುಬಾರಿ ಆಟಗಾರ

Update: 2018-01-04 16:14 GMT

ಚೆನ್ನೈ, ಡಿ.4: ಐಪಿಎಲ್‌ನ ಎರಡು ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡ ಎರಡು ವರ್ಷಗಳ ನಿಷೇಧದ ಬಳಿಕ ಮುಂದಿನ ಆವೃತ್ತಿಯ ಟೂರ್ನಮೆಂಟ್‌ಗೆ ತಯಾರಿ ನಡೆಸುತ್ತಿದ್ದು, ಆಟಗಾರ ಹರಾಜಿಗೂ ಮುನ್ನ ನಡೆದ ಆಟಗಾರರ ಉಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ತೆಕ್ಕೆಗೆ ಮತ್ತೆ ಸೆಳೆದುಕೊಂಡಿದೆ.

 ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದ ಆಟಗಾರರ ಉಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಐಪಿಎಲ್‌ನ ಫ್ರಾಂಚೈಸಿಗಳು ಉಳಿಸಿಕೊಂಡಿರುವ ಪ್ರಮುಖ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಐಪಿಎಲ್‌ನ ಇತಿಹಾಸದಲ್ಲಿ ದುಬಾರಿ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಅವರು 17 ಕೋಟಿ ರೂ.ಗೆ ತಮ್ಮ ಹಳೆಯ ತಂಡ ರಾಯಲ್ ಚಾಲೆಂಜರ್ಸ್‌ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

   ಮುಂದಿನ ಮೂರು ಆವೃತ್ತಿಗಳಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾಯಕರಾಗಲಿದ್ದಾರೆ. ಅವರು 15 ಕೋಟಿ ರೂ.ಗೆ ಹಳೆಯ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತ್ತು ಮುಂಬೈ ಇಂಡಿಯನ್ಸ್ ತಂಡವನ್ನು ಉಪ ನಾಯಕ ರೋಹಿತ್ ಶರ್ಮಾ ನಾಯಕರಾಗಿ ಮುನ್ನಡೆಸಲಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್‌ ತಂಡ ನಾಯಕ ಗೌತಮ್ ಗಂಭೀರ್ ಅವರನ್ನು ಕೈ ಬಿಟ್ಟಿದೆ. ಅವರು ಆಟಗಾರರ ಹರಾಜಿನ ಮೂಲಕ ಬೇರೆ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕಿದೆ.

ರಾಜಸ್ಥಾನ ರಾಯಲ್ಸ್ ತಂಡ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಿದೆ. ಚೆನ್ನೈ ತಂಡದಲ್ಲಿ ಹಿಂದೆ ಧೋನಿ ಅವರೊಂದಿಗೆ ಇದ್ದ ಸುರೇಶ್ ರೈನಾ ಮತ್ತು ರವೀಂದ್ರ ಜಡೇಜ ಮತ್ತೆ ಧೋನಿ ಬಳಗ ಸೇರಿಕೊಂಡಿದ್ದಾರೆ.

ವಿವಿಧ ತಂಡಗಳಲ್ಲಿ ಸ್ಥಾನ ಉಳಿಸಿಕೊಂಡ ಆಟಗಾರರು ಮತ್ತು ಅವರ ಲೀಗ್ ಫೀಸ್ ವಿವರ ಇಂತಿವೆ

►ಚೆನ್ನೈ ಸೂಪರ್ ಕಿಂಗ್ಸ್

ಎಂಎಸ್ ಧೋನಿ - 15.00 ಕೋಟಿ ರೂ.

ಸುರೇಶ್ ರೈನಾ - 11.00ಕೋಟಿ ರೂ.

ರವೀಂದ್ರ ಜಡೇಜ - 07 .00ಕೋಟಿ ರೂ.

►ಡೆಲ್ಲಿ ಡೇರ್ ಡೆವಿಲ್ಸ್

ರಿಷಬ್ ಪಂತ್ - 08.00ಕೋಟಿ ರೂ.

ಕ್ರಿಸ್ ಮೋರೀಸ್ - 07.10ಕೋಟಿ ರೂ.

ಶ್ರೇಯಸ್ ಅಯ್ಯರ್ - 07.00 ಕೋಟಿ ರೂ.

►ಕಿಂಗ್ಸ್ ಇಲೆವೆನ್ ಪಂಜಾಬ್

ಅಕ್ಷರ್ ಪಟೇಲ್ - 06.75 ಕೋಟಿ ರೂ.

►ಕೋಲ್ಕತಾ ನೈಟ್ ರೈಡರ್ಸ್‌

ಸುನೀಲ್ ನರೇನ್ - 08.50 ಕೋಟಿ ರೂ.

ಆ್ಯಂಡ್ರೆ ರಸೆಲ್ - 07.00 ಕೋಟಿ ರೂ.

►ಮುಂಬೈ ಇಂಡಿಯನ್ಸ್

ರೋಹಿತ್ ಶರ್ಮಾ - 15.00 ಕೋಟಿ ರೂ.

ಹಾರ್ದಿಕ್ ಪಾಂಡ್ಯ - 11.00 ಕೋಟಿ ರೂ.

ಜಸ್‌ಪ್ರೀತ್ ಬುಮ್ರಾ - 07.00 ಕೋಟಿ ರೂ.

ರಾಜಸ್ಥಾನ ರಾಯಲ್ಸ್ ಸ್ಟೀವ್ ಸ್ಮಿತ್ - 12.00 ಕೋಟಿ ರೂ.

►ರಾಯಲ್ ಚಾಲೆಂಜರ್ಸ್‌ ತಂಡ

ವಿರಾಟ್ ಕೊಹ್ಲಿ - 17.00 ಕೋಟಿ ರೂ.

ಎಬಿ ಡಿ ವಿಲಿಯರ್ಸ್ - 11.00 ಕೋಟಿ ರೂ.

ಸರ್ಫರಾಝ್ ಖಾನ್ - 1.75 ಕೋಟಿ ರೂ.

►ಸನ್‌ರೈಸರ್ಸ್‌ ಹೈದರಾಬಾದ್

ಡೇವಿಡ್ ವಾರ್ನರ್ - 12.00 ಕೋಟಿ ರೂ.

ಭುವನೇಶ್ವರ್ ಕುಮಾರ್ - 08.50 ಕೋಟಿ ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News