ಪ್ರಥಮ ಟೆಸ್ಟ್ ನಲ್ಲಿ ಟೀಮ್ ಇಂಡಿಯಾಕ್ಕೆ ಸೋಲು
Update: 2018-01-08 20:33 IST
ಕೇಪ್ ಟೌನ್ , ಜ.8: ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ನಲ್ಲಿ ಸೋಮವಾರ ಟೀಮ್ ಇಂಡಿಯಾ 72 ರನ್ ಗಳ ಸೋಲು ಅನುಭವಿಸಿದೆ.
ಟೆಸ್ಟ್ ನ ನಾಲ್ಕನೇ ದಿನವಾಗಿರುವ ಇಂದು ಗೆಲುವಿಗೆ 208 ರನ್ ಗಳ ಸವಾಲನ್ನು ಪಡೆದ ಭಾರತ ಎರಡನೇ ಇನಿಂಗ್ಸ್ ನಲ್ಲಿ ಫಿಲ್ಯಾಂಡರ್ (42ಕ್ಕೆ 6)ಪ್ರಹಾರಕ್ಕೆ ಸಿಲುಕಿ 42.4 ಓವರ್ ಗಳಲ್ಲಿ 135 ರನ್ ಗಳಿಗೆ ಆಲೌಟಾಗಿದೆ. ಇದರೊಂದಿಗೆ ದ.ಆಫ್ರಿಕ 3 ಟೆಸ್ಟ್ ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.