ಶ್ರೇಷ್ಠ ಬೌಲರ್ ಅಲನ್ ಡೊನಾಲ್ಡ್ ಪ್ರಕಾರ ಭಾರತವನ್ನು ಬಚಾವ್ ಮಾಡಬಲ್ಲ ಸಾಮರ್ಥ್ಯ ಇರುವುದು ಈ ಬ್ಯಾಟ್ಸ್‌ಮನ್‌ಗೆ ಮಾತ್ರ

Update: 2018-01-11 15:35 GMT

 ಹೊಸದಿಲ್ಲಿ, ಜ.11: ಕೇಪ್‌ಟೌನ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸೋತ ಬಳಿಕ ಕ್ರಿಕೆಟ್ ತಜ್ಞರು ಅಜಿಂಕ್ಯ ರಹಾನೆಯನ್ನು ತಂಡದಿಂದ ಕೈಬಿಟ್ಟ ಬಗ್ಗೆ ಪ್ರಶ್ನಿಸಲಾರಂಭಿಸಿದ್ದಾರೆ. ಹೀಗೆ ಪ್ರಶ್ನಿಸುವವರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕದ ಮಾಜಿ ವೇಗದ ಬೌಲರ್ ಅಲನ್ ಡೊನಾಲ್ಡ್ ಹೊಸ ಸೇರ್ಪಡೆಯಾಗಿದ್ದಾರೆ.

ಡೊನಾಲ್ಡ್ ಪ್ರಕಾರ, ಭಾರತವನ್ನು ಬಚಾವ್ ಮಾಡಬಲ್ಲ ಸಾಮರ್ಥ್ಯ ಇರುವುದು ಮುಂಬೈ ಬ್ಯಾಟ್ಸ್‌ಮನ್ ರಹಾನೆಗೆ ಮಾತ್ರ. ಮಧ್ಯಮ ಕ್ರಮಾಂಕದ ಆಟಗಾರ ರಹಾನೆ ದಕ್ಷಿಣ ಆಫ್ರಿಕದ ಬೌನ್ಸಿ ಹಾಗೂ ವೇಗದ ಪಿಚ್‌ನಲ್ಲಿ ಯಶಸ್ಸು ಕಾಣುವುದು ನಿಶ್ಚಿತ. ರಹಾನೆ ಭಾರತದ ಬ್ಯಾಟಿಂಗ್ ಸರದಿಗೆ ಶಕ್ತಿ ತುಂಬಬಲ್ಲರು.

‘‘ರಹಾನೆಯನ್ನು ಟೀಮ್ ಇಂಡಿಯಾದ ಆಡುವ 11ರ ಬಳಗದಿಂದ ಹೊರಗಿಟ್ಟಿರುವುದು ಕಠಿಣ ನಿರ್ಧಾರ. ಕಳೆದ ಬಾರಿ ಅವರು ದಕ್ಷಿಣ ಆಫ್ರಿಕಕ್ಕೆ ಬಂದಿದ್ದಾಗ ಚೆನ್ನಾಗಿ ಆಡಿದ್ದರು. ಅವರಿಗೆ ತಂಡವನ್ನು ಸುಸ್ಥಿತಿಯಲ್ಲಿಡುವ ತಾಕತ್ತಿದೆ. ಜವಾಬ್ದಾರಿ ಹೊರುವ ಶಕ್ತಿ ಅವರಿಗಿದೆ’’ ಎಂದು ಡೊನಾಲ್ಡ್ ಹೇಳಿದ್ದಾರೆ.

ಭಾರತ ತ್ರಿವಳಿ ವೇಗಿಗಳಾದ ಭುವನೇಶ್ವರ ಕುಮಾರ್, ಜಸ್‌ಪ್ರಿತ್‌ಬುಮ್ರಾ ಹಾಗೂ ಮುಹಮ್ಮದ್ ಶಮಿ ಬೌಲಿಂಗ್ ಬಗ್ಗೆ 51ರ ಹರೆಯದ ಡೊನಾಲ್ಡ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News