ಅಂಡರ್ -19 ವಿಶ್ವಕಪ್: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ 100 ರನ್‌ಗಳ ಭರ್ಜರಿ ಜಯ

Update: 2018-01-14 11:37 GMT

 ವೌಂಟ್ ಮಾಂಗಾನುಯಿ, ಜ.14: ಇಲ್ಲಿ ನಡೆದ ಅಂಡರ್ -19 ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ 100 ರನ್‌ಗಳ ಭರ್ಜರಿ ಜಯ ಗಳಿಸಿದೆ.

 ಇದರೊಂದಿಗೆ ಭಾರತ ಗೆಲುವಿನೊಂದಿಗೆ ವಿಶ್ವಕಪ್‌ನಲ್ಲಿ ಅಭಿಯಾನ ಆರಂಭಿಸಿದೆ. ಗೆಲುವಿಗೆ 329 ರನ್‌ಗಳ ಸವಾಲನ್ನು ಪಡೆದ ಆಸ್ಟ್ರೇಲಿಯ ತಂಡ ಕಮಲೇಶ್ ನಾಗರಕೋಟಿ (29ಕ್ಕೆ 3) ಮತ್ತು ಶಿವಮ್ ಮಾವಿ(45ಕ್ಕೆ 3) ದಾಳಿಗೆ ಸಿಲುಕಿ 42.5 ಓವರ್‌ಗಳಲ್ಲಿ 228 ರನ್‌ಗಳಿಗೆ ಆಲೌಟಾಗಿದೆ. ಆರಂಭಿಕ ದಾಂಡಿಗ ಜಾಕ್ ಎಡ್ವರ್ಡ್ಸ್ (79) ಆಸ್ಟ್ರೇಲಿಯದ ಪರ ಗರಿಷ್ಠ ವೈಯಕ್ತಿಕ ಕೊಡುಗೆ ನೀಡಿದರು.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತದ ಅಂಡರ್ -19 ತಂಡ ನಿಗದಿತ 50 ಓವರ್‌ಗಳಲ್ಲಿ 328 ರನ್ ಗಳಿಸಿತ್ತು. ನಾಯಕ ಪ್ರಥ್ವಿ ಶಾ 94ರನ್, ಆರಂಭಿಕ ದಾಂಡಿಗ ಮನ್‌ಜೋತ್ ಕಾಲ್‌ರಾ 86 ರನ್ ಮತ್ತು ಶುಭಮ್ ಗಿಲ್ 63 ರನ್ ನೆರವಿನಲ್ಲಿ ಭಾರತ ಗೆಲುವಿಗೆ ಆಸ್ಟ್ರೇಲಿಯಕ್ಕೆ ಕಠಿಣ ಸವಾಲು ವಿಧಿಸಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News