ವಿರಾಟ್ ಕೊಹ್ಲಿ ವೇಗದ 53ನೇ ಅಂತಾರಾಷ್ಟ್ರೀಯ ಶತಕ
ಸೆಂಚೂರಿಯನ್ , ಜ.15: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕ ವಿರುದ್ಧ ದ್ವಿತೀಯ ಕ್ರಿಕೆಟ್ ಟೆಸ್ಟ್‌ನಲ್ಲಿ ಶತಕ ಗಳಿಸುವುದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ 53ನೇ ಶತಕ ದಾಖಲಿಸಿದರು.
ಟೆಸ್ಟ್‌ನ ಮೂರನೇ ದಿನವಾಗಿರುವ ಸೋಮವಾರ ಕೊಹ್ಲಿ ತನ್ನ 65ನೇ ಟೆಸ್ಟ್‌ನ 109ನೇ ಇನಿಂಗ್ಸ್‌ನಲ್ಲಿ ಕೊಹ್ಲಿ 21ನೇ ಶತಕ ದಾಖಲಿಸಿದರು. ಕೊಹ್ಲಿ 109 ಟೆಸ್ಟ್ ಇನಿಂಗ್ಸ್ ,194 ಏಕದಿನ ಇನಿಂಗ್ಸ್ ಮತ್ತು 51 ಟ್ವೆಂಟಿ-20 ಸೇರಿದಂತೆ ಒಟ್ಟು 354 ಅಂತಾರಾಷ್ಟ್ರೀಯ ಕ್ರಿಕೆಟ್‌ನ ಇನಿಂಗ್ಸ್‌ಗಳಲ್ಲಿ 53 ಶತಕಗಳನ್ನು ದಾಖಲಿಸಿ ದಕ್ಷಿಣ ಆಫ್ರಿಕದ ಹಾಶಿಮ್ ಅಮ್ಲ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಅಮ್ಲ ಅವರು 380 ಇನಿಂಗ್ಸ್‌ಗಳಲ್ಲಿ 53 ಅಂತಾರಾಷ್ಟ್ರೀಯ ಶತಕ ದಾಖಲಿಸಿದ್ದರು.
ಕೊಹ್ಲಿ 65 ಟೆಸ್ಟ್‌ಗಳ 109 ಇನಿಂಗ್ಸ್‌ಗಳಲ್ಲಿ 21 ಶತಕ, 202 ಏಕದಿನ ಪಂದ್ಯಗಳ 194 ಇನಿಂಗ್ಸ್ ಗಳಲ್ಲಿ 32 ಶತಕ ದಾಖಲಿಸಿದ್ದಾರೆ. ಆದರೆ ಅವರಿಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಇನ್ನೂ ಶತಕ ದಾಖಲಿಸಲು ಸಾಧ್ಯವಾಗಿಲ್ಲ.
ಕೊಹ್ಲಿ ದಕ್ಷಿಣ ಆಫ್ರಿಕದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಬಳಿಕ ಗರಿಷ್ಠ ಶತಕ ದಾಖಲಿಸಿದ ಭಾರತದ ಎರಡನೇ ದಾಂಡಿಗ ಎನಿಸಿಕೊಂಡಿದ್ದಾರೆ. 43 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದರೂ ಅಮ್ಲ ಅವರಿಗೂ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ತನಕ ಶತಕ ದಾಖಲಿಸಲು ಸಾಧ್ಯವಾಗಿಲ್ಲ. ಅಮ್ಲ ಅವರ ಅಂತಾರಾಷ್ಟ್ರೀಯ ಶತಕದ ದಾಖಲೆಯನ್ನು ಸರಿಗಟ್ಟಲು ಕೊಹ್ಲಿ ಇನ್ನೊಂದು ಶತಕ ದಾಖಲಿಸಬೇಕಾಗಿದೆ. ಅಮ್ಲ ಒಟ್ಟು 54 ಅಂತಾರಾಷ್ಟ್ರೀಯ ಶತಕ ಗಳಿಸಿದ್ದಾರೆ.
ಅಮ್ಲ 112ಟೆಸ್ಟ್‌ಗಳ 190 ಇನಿಂಗ್ಸ್‌ಗಳಲ್ಲಿ 28 ಶತಕ ಮತ್ತು 158 ಏಕದಿನ ಕ್ರಿಕೆಟ್‌ನ 155 ಇನಿಂಗ್ಸ್‌ಗಳಲ್ಲಿ 26 ಶತಕ ದಾಖಲಿಸಿದ್ದಾರೆ.
ಭಾರತ 307ಕ್ಕೆ ಆಲೌಟ್
ಭಾರತ ದ್ವಿತೀಯ ಕ್ರಿಕೆಟ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 92.1 ಓವರ್‌ಗಳಲ್ಲಿ 307 ರನ್‌ಗಳಿಗೆ ಆಲೌಟಾಗಿದೆ.
ವಿರಾಟ್ ಕೊಹ್ಲಿ 153 ರನ್ (217ಎ, 15) ಗಳಿಸಿದರು. ದಕ್ಷಿಣ ಆಫ್ರಿಕ 28 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದೆ.