ಸೆಂಚೂರಿಯನ್‌ನಲ್ಲಿ ಕೊಹ್ಲಿ ಪಡೆಗೆ ಸೋಲಿನ ಭೀತಿ

Update: 2018-01-16 16:39 GMT
ಕಾಗಿಸೊ ರಬಾಡ ಎಸೆತದಲ್ಲಿ ಮುರಳಿ ವಿಜಯ್ ಬೌಲ್ಡ್

   ಸೆಂಚೂರಿಯನ್, ಜ.16: ದಕ್ಷಿಣ ಆಫ್ರಿಕ ವಿರುದ್ಧ ದ್ವಿತೀಯ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತಕ್ಕೆ ಸವಾಲು ಅಷ್ಟೇನೂ ಕಠಿಣವಾಗಿರದಿದ್ದರೂ ಒತ್ತಡಕ್ಕೆ ಸಿಲುಕಿ ಅಗ್ರ ಸರದಿಯ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಸೂಪರ್‌ಸ್ಪೋರ್ಟ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ಮಂಗಳವಾರ ದ್ವಿತೀಯ ಇನಿಂಗ್ಸ್‌ನಲ್ಲಿ ಗೆಲುವಿಗೆ 287 ರನ್‌ಗಳ ಸವಾಲು ಪಡೆದಿರುವ ಟೀಮ್ ಇಂಡಿಯಾ ಕಾಗಿಸೊ ರಬಾಡ ಮತ್ತು ಲುಂಗಸಾನಿ ನೆಗಿಡಿ ದಾಳಿಗೆ ತತ್ತರಿಸಿದೆ.  ನಾಲ್ಕನೇ ದಿನದಾಟದ ಮುಕ್ತಾಯಕ್ಕೆ ಭಾರತ ದ್ವಿತೀಯ ಇನಿಂಗ್ಸ್‌ನಲ್ಲಿ  23 ಓವರ್‌ಗಳಲ್ಲಿ  3 ವಿಕೆಟ್ ನಷ್ಟದಲ್ಲಿ 35ರನ್ ಗಳಿಸಿದೆ.

ಆರಂಭಿಕ ದಾಂಡಿಗರಾದ ಮುರಳಿ ವಿಜಯ್(9) ಮತ್ತು ಲೋಕೇಶ್ ರಾಹುಲ್(4), ನಾಯಕ ವಿರಾಟ್ ಕೊಹ್ಲಿ(5) ವಿಕೆಟ್‌ನ್ನು ಕಳೆದುಕೊಂಡು ಭಾರತ ಸೋಲಿನ ದವಡೆಗೆ ಸಿಲುಕಿದೆ. ಗೆಲುವಿಗೆ ಇನ್ನೂ 252 ರನ್ ಗಳಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News