ಬ್ರಾಡ್ಮನ್ ದಾಖಲೆ ಸರಿಗಟ್ಟಿದ ಕೊಹ್ಲಿ

Update: 2018-01-16 17:48 GMT

ಸೆಂಚೂರಿಯನ್, ಜ.16: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕರಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ 8ನೇ ಬಾರಿ 150ಕ್ಕಿಂತ ಅಧಿಕ ರನ್ ದಾಖಲಿಸಿ ಆಸ್ಟ್ರೇಲಿಯದ ದಂತಕತೆ ಡಾನ್ ಬ್ರಾಡ್ಮನ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಸೆಂಚೂರಿಯನ್‌ನಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕ ವಿರುದ್ಧದ ದ್ವಿತೀಯ ಕ್ರಿಕೆಟ್ ಟೆಸ್ಟ್‌ನ ಮೂರನೇ ದಿನವಾಗಿರುವ ಸೋಮವಾರ ಭಾರತದ ಮೊದಲ ಇನಿಂಗ್ಸ್‌ನಲ್ಲಿ 153 ರನ್ ಗಳಿಸಿ ಔಟಾದರು.

ಇದೇ ವೇಳೆ ಕೊಹ್ಲಿ ಅವರು ಆಸ್ಟ್ರೇಲಿಯದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಕ್ಲಾರ್ಕ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 7ನೇ ಬಾರಿ 150ಕ್ಕಿಂತ ಹೆಚ್ಚು ರನ್ ಗಳಿಸಿದ್ದರು.

ಶ್ರೀಲಂಕಾದ ಮಾಜಿ ನಾಯಕ ಮಹೇಲ್ ಜಯವರ್ದನೆ, ವಿಂಡೀಸ್‌ನ ಬ್ರಿಯಾನ್ ಲಾರಾ, ದಕ್ಷಿಣ ಆಫ್ರಿಕದ ಗ್ರೇಮ್ ಸ್ಮಿತ್ ಅವರು ತಮ್ಮ ವೃತ್ತಿ ಬದುಕಿನಲ್ಲಿ 7 ಬಾರಿ ಟೆಸ್ಟ್‌ನಲ್ಲಿ 150ಕ್ಕೂ ಅಧಿಕ ರನ್ ಗಳಿಸಿದ್ದರು.ದಕ್ಷಿಣ ಆಫ್ರಿಕದ ನೆಲದಲ್ಲಿ ಶತಕ ದಾಖಲಿಸಿದ ಏಷ್ಯಾದ ಎರಡನೇ ನಾಯಕ ಎನಿಸಿಕೊಂಡಿದ್ದಾರೆ ಕೊಹ್ಲಿ.

ಸಚಿನ್ ತೆಂಡುಲ್ಕರ್ ಈ ಸಾಧನೆ ಮಾಡಿದ ಮೊದಲ ನಾಯಕ ಎನಿಸಿಕೊಂಡಿದ್ದರು. ಸಚಿನ್ 1997ರಲ್ಲಿ ಕೇಪ್‌ಟೌನ್‌ನಲ್ಲಿ 169 ರನ್ ಗಳಿಸಿದ್ದರು.ಸಚಿನ್ ತೆಂಡುಲ್ಕರ್ ದಕ್ಷಿಣ ಆಫ್ರಿದಲ್ಲಿ 5 ಶತಕ ದಾಖಲಿಸಿದ್ದರು. ಕೊಹ್ಲಿ ಎರಡನೇ ಶತಕ ಬಾರಿಸಿದ್ದಾರೆ.

ಸೆಂಚೂರಿಯನ್‌ನಲ್ಲಿ 150ಕ್ಕೂ ಅಧಿಕ ರನ್ ದಾಖಲಿಸಿದ ವಿದೇಶಿ ತಂಡದ ಮೊದಲ ನಾಯಕ ಕೊಹ್ಲಿ. 29ರ ಹರೆಯದ ಕೊಹ್ಲಿ ಸೆಂಚೂರಿಯನ್‌ನಲ್ಲಿ ಶತಕ ದಾಖಲಿಸಿದ ವಿದೇಶಿ ತಂಡದ ಮೊದಲ ನಾಯಕ. ಮಹೇಂದ್ರ ಸಿಂಗ್ ಧೋನಿ 2010ರಲ್ಲಿ ಸೆಂಚೂರಿಯನ್‌ನಲ್ಲಿ 90 ರನ್ ಗಳಿಸಿದ್ದರು. ಇದು ಭಾರತದ ಪರ ದಾಖಲಾದ ಭಾರತದ ತಂಡದ ನಾಯಕನ ಹಿಂದಿನ ಗರಿಷ್ಠ ಸ್ಕೋರ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News