ಚಳಿಗಾಲದ ಒಲಿಂಪಿಕ್ಸ್: ಉತ್ತರ, ದಕ್ಷಿಣ ಕೊರಿಯಗಳಿಂದ ಒಂದೇ ಐಸ್ ಹಾಕಿ ತಂಡ

Update: 2018-01-17 17:12 GMT
ಸಾಂದರ್ಭಿಕ ಚಿತ್ರ

ಸಿಯೋಲ್, ಜ. 17: ದಕ್ಷಿಣ ಕೊರಿಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಏಕೀಕೃತ ಮಹಿಳಾ ಐಸ್ ಹಾಕಿ ತಂಡವೊಂದನ್ನು ಕಳುಹಿಸಲು ಉತ್ತರ ಮತ್ತು ದಕ್ಷಿಣ ಕೊರಿಯಗಳು ಬುಧವಾರ ನಿರ್ಧರಿಸಿವೆ.

ಅದೇ ವೇಳೆ, ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಏಕೀಕೃತ ಪರ್ಯಾಯ ದ್ವೀಪ ಧ್ವಜದಡಿಯಲ್ಲಿ ಜೊತೆಯಾಗಿ ಕವಾಯತು ನಡೆಸಲು ಕೂಡ ಉಭಯ ಕೊರಿಯಗಳು ನಿರ್ಧರಿಸಿವೆ ಎಂಬುದಾಗಿ ಸಿಯೋಲ್‌ನ ಏಕೀಕರಣ ಸಚಿವಾಲಯ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯೊಂದು ತಿಳಿಸಿದೆ.

ಉತ್ತರ ಕೊರಿಯವು 230 ಹುರಿದುಂಬಿಸುವವರು, 140 ಕಲಾವಿದರು ಮತ್ತು ಪ್ರದರ್ಶನಕ್ಕಾಗಿ 30 ಟ್ವೇಕ್ವೊಂಡೊ ಆಟಗಾರರು ಸೇರಿದಮತೆ 550 ಸದಸ್ಯರ ನಿಯೋಗವೊಂದನ್ನು ಕಳುಹಿಸಲಿದೆ ಎಂದು ಹೇಳಿಕೆ ತಿಳಿಸಿದೆ.

ನಿಯೋಗವು ಜನವರಿ 25ರ ಬಳಿಕ ದಕ್ಷಿಣ ಕೊರಿಯಕ್ಕೆ ಬರಲಿದೆ.

ಉಭಯ ದೇಶಗಳ ಗಡಿಯ ದಕ್ಷಿಣದ ಭಾಗದಲ್ಲಿರುವ ಪನ್‌ಮುಂಜೊಮ್ ಶಾಂತಿ ಗ್ರಾಮದಲ್ಲಿ ಈ ಮಹತ್ವದ ಮಾತುಕತೆಗಳು ನಡೆದಿವೆ.

ಉಭಯ ತಂಡಗಳ ತಲಾ ಮೂವರು ಅಧಿಕಾರಿಗಳು ಮಾತುಕತೆಯಲ್ಲಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News